ಮೈಸೂರು: ಅಂಬೇಡ್ಕರ್ ಬಗ್ಗೆ ಮಾತನಾಡುವ, ನೈತಿಕತೆ ಕಾಂಗ್ರೆಸ್ʼಗೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಮಾತನಾಡುವ, ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದ ಕಾಂಗ್ರೆಸ್ನವರು ಈಗ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದರು.
ಅಂಬೇಡ್ಕರ್ ತೀರಿಕೊಂಡಾಗ ಅವರಿಗೆ ದೆಹಲಿಯಲ್ಲಿ ಅಂಗೈಯಷ್ಟು ಜಾಗ ಕೊಡಲಿಲ್ಲ. ಈಗ ನೆಹರೂ – ಇಂದಿರಾಗಾಂಧಿ – ರಾಜೀವ್ ಗಾಂಧಿಗೆ ಎಕರೆಗಟ್ಟಲೇ ಜಾಗ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದ ಕಾಂಗ್ರೆಸ್, ಈಗ ದಲಿತರನ್ನ ಓಲೈಕೆ ಮಾಡಲು ಮುಂದಾಗಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು, ಬಿಜೆಪಿ ಸರ್ಕಾರ. ಅಂಬೇಡ್ಕರ್ ಹೋರಾಟ ಮಾಡಿ ಜಾಗವನ್ನು ಪಂಚಪೀಠ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.