ಬೆಂಗಳೂರು:- ಕಾಂಗ್ರೆಸ್ ಇರೋದ್ರಿಂದ ಮುಸಲ್ಮಾನರದ್ದು ಆಡಿದ್ದೇ ಆಟವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಮುಸ್ಲಿಮರಿಗೆ ಫ್ರೀ ಪಾಸ್ ಕೊಟ್ಟಿದ್ದಾರೆ. ನಾವು ಏನು ಮಾಡಿದರೂ ಕರ್ನಾಟಕದಲ್ಲಿ ಬಚಾವ್ ಆಗಬಹುದು ಅನ್ನೋ ಮನಸ್ಥಿತಿಗೆ ಮುಸಲ್ಮಾನರು ಬಂದಿದ್ದಾರೆ ಎಂದರು.
ನಾಗಮಂಗಲದ ಘಟನೆ ಬಹಳ ದುರಂತಕಾರಿಯಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಮುಸಲ್ಮಾನರಿಗೆ ಒಂದು ಥರ ಫ್ರೀಡಂ ಸಿಕ್ಕಿದೆ. ಹೀಗಾಗಿ ನಾವು ಕಲ್ಲು ಹೊಡೆದು ಬಚಾವ್ ಆಗಬಹುದು, ಮೂರ್ತಿ ಕೆಡವಿ ಬಚಾವ್ ಆಗಬಹುದು ಅಂದುಕೊಂಡಿದ್ದಾರೆ. ನಾಗಮಂಗಲದಲ್ಲಿ ಕಲ್ಲು ಎಸೆದಿರುವುದು ಇದೇ ಮನಸ್ಥಿತಿಯಲ್ಲಿ. ಗಣೇಶೋತ್ಸವ ಮಾಡೋದು ಹಿಂದೂಗಳು ಒಗ್ಗಟ್ಟಾಗಿ ಒಂದು ಕಡೆ ಸೇರಲಿ ಎಂದು. ನಿಮ್ಮ ದರ್ಗಾ, ಮಸೀದಿ ಎದುರು ಮೆರವಣಿಗೆ ಬರಬಾರದು ಎಂದರೆ ಯಾವ ನಿಯಮ ಇದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದು ಸ್ವತಂತ್ರ ಭಾರತ ಅವರವರ ಧಾರ್ಮಿಕ ಆಚರಣೆ ಮಾಡುವ ಅವಕಾಶವಿದೆ. ಗಣೇಶೋತ್ಸವ ಮೆರವಣಿ ಸದ್ದು ಮುಸ್ಲಿಮರಿಗೆ ಬೇಡ. ಆದರೆ ಪ್ರತೀ ದಿನ ಮಸೀದಿಗಳಿಂದ ಅಜಾನ್ ಕೇಳುತ್ತದೆ. ಅದನ್ನ ಹಿಂದೂಗಳು ಸಹಿಸಿಕೊಳ್ಳಬೇಕು. ಆದರೆ ಹನುಮ ಜಯಂತಿ, ಗಣೇಶೋತ್ಸವ ನಿಮಗೆ ಯಾಕೆ ಬೇಡ ಎಂದು ಪ್ರಶ್ನಿಸಿದರು.