ಬೆಂಗಳೂರು: ಸಾರ್ವಜನಿಕ ಹಣ ಪೋಲು ಮಾಡುವ ವಿಷಯದಲ್ಲಿ ಕಾಂಗ್ರೆಸ್ ವಿವಿ ಆರಂಭಿಸಿದೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದುಂದುವೆಚ್ಚದಲ್ಲಿ ಉಡಾಯಿಸಿ ಮಜಾ ಮಾಡುವ ಮಜಾವಾದಿ ಎಂದು ಹೇಳಿದರು.
Advertisement
ಅವರ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸುವ ಬಟ್ಟೆ ಮತ್ತು ಶೂಗಳ ಮೇಲೆ ಟೀಕೆ ಮಾಡುತ್ತಾರೆ, ಆದರೆ ಸಿದ್ದರಾಮಯ್ಯ ಹೆಲಿಕಾಪ್ಟರ್ನಲ್ಲಿ ಹಾರಾಡುತ್ತಾ ಹಣವನ್ನು ವ್ಯಯ ಮಾಡುತ್ತಿದ್ದಾರೆ, 19 ಕೋಟಿ ರೂ. ಹಣವನ್ನು ಅವರು ಕೇವಲ ಚಾಪರ್ಗಾಗಿ ಖರ್ಚು ಮಾಡಿದ್ದಾರೆ ಎಂದು ಹೇಳಿದರು.