ಕೊಪ್ಪಳ:- ರಾಜ್ಯದ ಜನರಿಗೆ, ವಾಲ್ಮೀಕಿ ಜನಾಂಗಕ್ಕೆ ಕಾಂಗ್ರೆಸ್ ದುಷ್ಟಶಕ್ತಿಯಾಗಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನಾರ್ದನ್ ರೆಡ್ಡಿ ಅವರು, ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯ ಇರಕಲಗಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್. ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಜಾಹೀರಾತಿನ ವಿಚಾರವಾಗಿ ಮಾತನಾಡಿದರು. ನನಗೆ ತಾಯಿ ಆಶೀರ್ವಾದ ಇದ್ದಿದ್ದರಿಂದಲೇ ನವರಾತ್ರಿ ಮೊದಲ ದಿನ ಬಳ್ಳಾರಿಗೆ ಹೋಗಲು ಅವಕಾಶ ಸಿಕ್ಕಿದೆ. ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ ಪಕ್ಷ. ಆದರೆ ಈ ದೇಶದ ಜನರು ಮೋದಿ ಅವರನ್ನು ಬೆಂಬಲಿಸಲಿಕ್ಕೆ ತಾಯಿ ಆಶೀರ್ವಾದವೇ ಕಾರಣ ಎಂದರು.
ರಾಜ್ಯದಲ್ಲಿ ಒಂದು ವರ್ಷದಲ್ಲಿ ಅನೇಕ ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ ಹಣ ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜ್ಯದ ಜನರಿಗೆ, ವಾಲ್ಮೀಕಿ ಜನಾಂಗಕ್ಕೆ ಇವರೇ ದುಷ್ಟಶಕ್ತಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಹತಾಸೆಯಾಗಿದ್ದಾರೆ. ಈಗಾಗಲೇ ಸಮುದ್ರದಲ್ಲಿ ಬಿದ್ದು, ಅಧಿಕಾರ ಉಳಿಸಿಕೊಳ್ಳಲು ಅನೇಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.