ಬೆಂಗಳೂರು: ಕೆಂಪೇಗೌಡ್ರು ಕಟ್ಟಿದ ಬೆಂಗಳೂರನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಾಶ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತನಾಡಿದ ಅವರು, ಕೆಂಪೇಗೌಡ್ರು ಕಟ್ಟಿದ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ನಾಶ ಮಾಡ್ತಿದ್ದಾರೆ.
ನಾನು ಎರಡು ಅವಧಿಯಲ್ಲಿ ಅಧಿಕಾರ ನಡೆಸಿದಾಗ ನಾಡಿನ ಜನರಿಗೆ ಎಂದಿಗೂ ದ್ರೋಹ ಮಾಡಿಲ್ಲ ಎಂದರು. ಇನ್ನೂ ಈ ಸರ್ಕಾರ ಇನ್ನೆರಡು ವರ್ಷಗಳು ಮುಂದುವರಿದ್ರೆ, ಇನ್ನೂ ಹತ್ತು ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನರ ತಲೆಗೆ ಕಟ್ಟುತ್ತಾರೆ. ಮನೆ ಮುಂದೆ ಕಾರು ನಿಲ್ಲಿಸಿದ್ರು ತೆರಿಗೆ, ಕುಡಿಯುವ ನೀರಿಗೂ ತೆರಿಗೆ,
ಕಸಕ್ಕೂ ತೆರಿಗೆ, ನಾವು ಮೈತ್ರಿ ಸರ್ಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದಾಗ ಯಾರ ಮೇಲೂ ತೆರಿಗೆ ಹಾಕಿಲ್ಲ ಎಂದರು. ವಿದ್ಯುತ್ ದರ ಏರಿಕೆ ಮಾಡಿದ್ದಾರೆ, ಅಭಿವೃದ್ಧಿ ಇಲ್ಲ, ರೈತರ ಪಂಪ್ ಸೆಟ್ ಗಳಿಗೂ ಟಿಸಿ ಹಾಕಲು 2500 ಖರ್ಚು ಮಾಡಬೇಕು, ಅಧಿಕಾರಿಗಳು ಅವರ ಜಾಗಕ್ಕೆ ಹೋಗಲು ದುಡ್ಡು ಕೊಡಬೇಕು ಎಂದು ಕಿಡಿಕಾರಿದ್ದಾರೆ.