ನವದೆಹಲಿ: ಇಡೀ ದೇಶದ ತುಂಬ ವಕ್ಪ್ ಆಸ್ತಿಯನ್ನು ಕಬಳಿಕೆ ಮಾಡಿದವರೇ ಕಾಂಗ್ರೆಸ್‌ನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಇಡೀ ದೇಶದ ತುಂಬ ವಕ್ಪ್ ಆಸ್ತಿಯನ್ನು ಕಬಳಿಕೆ ಮಾಡಿದವರೇ ಕಾಂಗ್ರೆಸ್‌ನವರು, ಅವರು ಮಾಡಿರುವ ಕಬಳಿಕೆಯನ್ನು ಮುಚ್ಚಿ ಹಾಕಲು ವಕ್ಸ್ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ವಕ್ಸ್ ಬಿಲ್ 1950ರ ದಶಕದಲ್ಲಿ ಬಂದಿದ್ದು. 1990 ಹಾಗೂ 2013 ರಲ್ಲಿ ತಿದ್ದುಪಡಿಯಾಗಿದೆ.
ಈಗ ತಿದ್ದುಪಡಿ ಮಾಡುತ್ತಿರುವುದೇನು ಹೊಸದೇನಲ್ಲ. 2013 ಕ್ಕಿಂತ ಮುಂಚೆ ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಸಮಿತಿ ಕೆಲವು ಶೀಫಾರಸು ಮಾಡಿತ್ತು. ಅವುಗಳಲ್ಲಿ ಆಗಿನ ಯುಪಿಎ ಸರ್ಕಾರ ಕೆಲವೇ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ಕೆಲವು ಅಂಶಗಳನ್ನು ಹಾಗೇ ಬಿಟ್ಟಿತ್ತು.
ಮುಖ್ಯವಾಗಿ ದೇಶದ ಕಾನೂನು ಬಹಳ ದೊಡ್ಡದು, ಸಂವಿಧಾನ ದೊಡ್ಡದು. 1990 ಹಾಗೂ 2013ರ ಕಾಯ್ದೆಯಲ್ಲಿ ಎಲ್ಲ ಕಾನೂನಿಗಿಂತ ವಕ್ಪ್ ದೊಡ್ಡದು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಕೂಡ ಇದರಲ್ಲಿ ಮಧ್ಯಸ್ಥಿಕೆ ವಹಿಸದಂತೆ ಮಾಡಲಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.