ಬೆಳಗಾವಿ: ಅಂಬೇಡ್ಕರ್ ಫೋಟೋ ಹಿಡಿಯುವ ನೈತಿಕತೆ ಕಾಂಗ್ರೆಸ್ʼಗೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಫೋಟೋ ಹಿಡಿಯುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಅಂಬೇಡ್ಕರ್ ಅವರೇ ಕಾಂಗ್ರೆಸ್ ಉರಿಯುತ್ತಿರುವ ಮನೆ.
Advertisement
ಆ ಮನೆಗೆ ಯಾರೂ ದಲಿತರು ಹೋಗಬಾರದು ಎಂದಿದ್ದರು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಜಾಗನೂ ಕೊಟ್ಟಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಂತ್ಯಸಂಸ್ಕಾರಕ್ಕೆ ಎಕರೆ ಗಟ್ಟಲೆ ಜಮೀನು ಕೊಟ್ಟಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಸದನ ಹಾಳು ಮಾಡಲು ಕಾಂಗ್ರೆಸ್ ಕಾರಣ. ಇವರ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಅಮಿತ್ ಶಾ ಸ್ಪಷ್ಟೀಕರಣ ನೀಡಿದ್ದಾರೆ. ಸ್ಪೀಕರ್ ಈ ತರದ ನಡಾವಳಿಗಳಿಗೆ ಅವಕಾಶ ಕೊಡಬಾರದು. ರಾಜಕೀಯ ಏನಾದರು ಇದ್ದರೆ ಹೊರಗಡೆ ಮಾಡಲಿ. ಸದನದಲ್ಲಿ ಮಾಡುವುದು ಸರಿಯಲ್ಲ ಎಂದು ಹೇಳಿದರು.