ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್’ಗೆ ಇಲ್ಲ: ಗೋವಿಂದ ಕಾರಜೋಳ

0
Spread the love

ಬೆಂಗಳೂರು: ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್’​ಗೆ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್​ರಿಗೆ ಅಪಮಾನ ಆಗಿದೆ ಅಂತ ದೇಶದ ಉದ್ದಗಲಕ್ಕೆ ಬೊಬ್ಬೆ ಹಾಕಿ ಕಾಂಗ್ರೆಸ್​ನವರು ಆರೋಪ ಮಾಡ್ತಿದ್ದಾರೆ. ಅಂಬೇಡ್ಕರ್​ಗೆ ಹಣಕಾಸು ಇಲಾಖೆ ಕೊಡದೆ, ಕಾನೂನು ಇಲಾಖೆ‌ ಕೊಟ್ರು. ಹೀಗೆ ಅವಮಾನ ಮಾಡಿ‌ದ್ದರಿಂದ ಅವರು ರಾಜೀನಾಮೆ ಕೊಟ್ಟು ಬಂದ್ರು ಎಂದು ಹೇಳಿದ್ದಾರೆ.

Advertisement

ಇನ್ನೂ ಅಂಬೇಡ್ಕರ್ ಅವರಿಗೆ ರಾಜ್​ಘಾಟ್​ನಲ್ಲಿ ಸಮಾಧಿಗೆ ಜಾಗ ಕೊಡಲಿಲ್ಲ. 5,000 ರೂ. ಬಾಡಿಗೆ ಕೊಟ್ಟು ಮುಂಬೈಗೆ ವಿಮಾನದ ಮೂಲಕ ಮೃತದೇಹ ತಂದು ಅವರ ಸಮಾಧಿ‌ ಮಾಡಿದ್ದನ್ನು ಮರೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಉರಿಯುವ ಮನೆ, ಕಾಂಗ್ರೆಸ್​ಗೆ ಹೋಗಬೇಡಿ ಎಂದು ಅಂಬೇಡ್ಕರ್ ಸಂದೇಶ ಕೊಟ್ಟಿದ್ರು. ವಿ. ಪಿ ಸಿಂಗ್ ಉಚ್ಚಾಟನೆ ಮಾಡಿದ್ರು, ದೇವರಾಜ್ ಅರಸು ಅವರನ್ನ ಕಾಂಗ್ರೆಸ್​ನಿಂದ ಉಚ್ಚಾಟನೆ ಮಾಡಿದ್ರು.

ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಉತ್ತರ ಕೊಡಬೇಕು. ಸಂವಿಧಾನವನ್ನ ಧರ್ಮ ಗ್ರಂಥ ಅಂತ ಹೇಳಿದ್ದು ಪ್ರಧಾನಿ ಮೋದಿಯವರು. ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನ ಮಾಡಿಲ್ಲ. ಕಾಂಗ್ರೆಸ್​ನವರ ಮೋಸ ಮಾಡುವ ವಿಚಾರಕ್ಕೆ ದಲಿತರು ಕಿವಿಗೊಡಬಾರದು. ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here