HomePolitics NewsRSSಗೆ ಚಮಚಗಿರಿ ಮಾಡಿದರೆ ಸುಮ್ಮನೆ ಬಿಡಲ್ಲ: ಕಾಂಗ್ರೆಸ್ ಮುಖಂಡ ಬಿ.ಕೆ ಅಲ್ತಾಫ್ ಗೆ ಜೀವ ಬೆದರಿಕೆ...

RSSಗೆ ಚಮಚಗಿರಿ ಮಾಡಿದರೆ ಸುಮ್ಮನೆ ಬಿಡಲ್ಲ: ಕಾಂಗ್ರೆಸ್ ಮುಖಂಡ ಬಿ.ಕೆ ಅಲ್ತಾಫ್ ಗೆ ಜೀವ ಬೆದರಿಕೆ ಕರೆ!

For Dai;y Updates Join Our whatsapp Group

Spread the love

ಬೆಂಗಳೂರು:- ಕಾಂಗ್ರೆಸ್ ಮುಖಂಡ ಹಾಗೂ ಅಲ್ಪಸಂಖ್ಯಾತ ನಿಗಮ ಅಧ್ಯಕ್ಷ ಬಿ.ಕೆ ಅಲ್ತಾಫ್ ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ.

ಘಟನೆ ಸಂಬಂಧ ಬಿ.ಕೆ.ಅಲ್ತಾಫ್ ಖಾನ್ ಜೆ.ಜೆ.ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ಪಿಎಫ್​ಐ ಸಂಘಟನೆಯವರೊಂದಿಗೆ ಆಟವಾಡಬೇಡ, ಆರ್​ಎಸ್​ಎಸ್​ ಏಜೆಂಟ್​ ಆಗಿ ಕೆಲಸ ಮಾಡಬೇಡ. ನಾಳೆ ನಿನ್ನ ಮಗಳ ಮದುವೆ ಇದೆ. ನಮ್ಮಿಂದ ನೀನು ಹಲವು ಬಾರಿ ಬಚಾವ್​ ಆಗಿದ್ದೀಯಾ. ಇನ್ಮುಂದೆ ನೀನು ಬಚಾವ್​ ಆಗಲು ಆಗಲ್ಲ. ನಿನ್ನ ತಮ್ಮಂದಿರನ್ನು ನೀನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ. ನೀನು ನ್ಯಾಯಾಲಯದಲ್ಲಿ ಕೇಸ್​ಗೆ ಸಾಕ್ಷಿ ಹೇಳಲು ಹೋಗಬಾರದು. ಹೋದರೇ ನೀನಿ ಉಳಿಯುವುದಿಲ್ಲ. ಆರ್​ಎಸ್​ಎಸ್​ಗೆ ಚಮಚಗಿರಿ ಮಾಡಿದರೆ ಪಿಎಫ್​​ಐ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಸದ್ಯ ಪ್ರಕರಣ ಜೆಜೆ ನಗರ ಠಾಣೆಯಿಂದ ಸಿಸಿಬಿಗೆ ವರ್ಗಾವಣೆವಾಗಿದೆ. ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ದುಬೈ ನಿಂದ ಅಲ್ತಾಫ್ ಕರೆ ಮಾಡಿರುವುದು ಬಯಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!