ಬೆಂಗಳೂರು: ಇಂದು ಮುಂಜಾನೆಯಷ್ಟೆ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಪಪ್ಪಿ ನಿವಾಸ ಹಾಗೂ ಬೆಂಗಳೂರಿನ ವಸಂತನಗರದಲ್ಲಿರೋ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು.
Advertisement
ಇದೀಗ ಸಿಕ್ಕಿಂನಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಮ ಹಣ ವರ್ಗಾವಣೆಗೆ ಆರೋಪ ಕೇಳಿ ಬಂದ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗ್ತಿದೆ. ಸಿಕ್ಕಿಂನ ಗ್ಯಾಂಗ್ಟಕ್ ನಲ್ಲಿ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸಿಕ್ಕಿಂ ಇಡಿ ಕಚೇರಿಯಲ್ಲೇ ವಿಚಾರಣೆ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಸಿಕ್ಕಿಂ ನಲ್ಲೂ ಕೈ ಶಾಸಕ ವ್ಯವಹಾರ ಹೊಂದಿದ್ದಾರೆ. ಗೇಮಿಂಗ್ ಆಪ್ ಗಳ ಮೂಲಕ ಹಣ ವರ್ಗಾವಣೆ ಜೊತೆಗೆ ವಿದೇಶದಲ್ಲಿ ಹಣ ಹೂಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ..