HomeGadag Newsಕಾಂಗ್ರೆಸ್ ಕಚೇರಿಯಲ್ಲಿ ಡಾ. ಸಿಂಗ್‌ ರಿಗೆ ನಮನ

ಕಾಂಗ್ರೆಸ್ ಕಚೇರಿಯಲ್ಲಿ ಡಾ. ಸಿಂಗ್‌ ರಿಗೆ ನಮನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಜಗತ್ತಿನಲ್ಲಿಯೇ ಓರ್ವ ಶ್ರೇಷ್ಠ ಆರ್ಥಿಕ ತಜ್ಞ ಎಂದು ಹೆಸರು ಮಾಡಿದ್ದ, ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ತಮ್ಮದೇ ಆದ ಹೊಸ ವಿಚಾರಗಳನ್ನು ಅಳವಡಿಸಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಭಾರತ ಆಧುನಿಕತೆಯ ಹರಿಕಾರನೋರ್ವನನ್ನು ಕಳೆದುಕೊಂಡAತಾಗಿದೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

ಅವರು ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ, ಭಾರತರತ್ನ ಡಾ.ಮನಮೋಹನ್‌ಸಿಂಗ್ ಅವರಿಗೆ ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶೃದ್ಧಾಂಜಲಿ ಅರ್ಪಿಸಿ, ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಸಿಂಗ್ ಅವರ ಆರ್ಥಿಕ ಚಿಂತನೆಗಳು ಇಂದು ಭಾರತವನ್ನು ಪ್ರಗತಿಯತ್ತ ನಡೆಸಿದೆ. ಅವರು ಅಪರೂಪದ ರಾಜಕಾರಣಿ, ದೂರದೃಷ್ಟಿ ಉಳ್ಳ ಪ್ರಧಾನಿಯಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿAದ ದೂರ ಮಾಡಿದವರು. ಆರ್‌ಬಿಐ ಗವರ್ನರ್ ಆಗಿ, ವಿಶ್ವಬ್ಯಾಂಕಿನ ಭಾರತದ ಪ್ರತಿನಿಧಿಯಾಗಿ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಸಂಪೂರ್ಣ ಶ್ರಮಿಸಿದ್ದರು. ಮೃದು ಸ್ವಭಾವದ ಚಿಂತನಾಶೀಲ ರಾಜಕಾರಣಿಯನ್ನು ಕಳೆದುಕೊಂಡAತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಬಸವರಾಜ ಹೊಳಲಾಪೂರ, ಬಸವರಾಜ ಓದುನವರ, ವೆಂಕಟೇಶ ಮಾತಾಡೆ, ಶೇಖಣ್ಣ ಲಮಾಣಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ಶಶಿಕಲಾ ಬಡಿಗೇರ, ಫಕ್ಕಿರೇಶ ನಂದೆಣ್ಣವರ, ಶಿವಾನಂದ ಲಿಂಗಶೆಟ್ಟಿ, ಮಹೇಶ ಸೂರಣಗಿ, ಮಂಜುನಾಥ ಬಟ್ಟೂರ, ಅಬ್ಜಲ್ ರಿತ್ತಿ, ಮುದಕಣ್ಣ ಗದ್ದಿ, ಮುತ್ತಣ್ಣ ಟೋಕಾಳಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!