ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕಾಂಗ್ರೆಸ್ ಪಕ್ಷದ ಜನಪರ ಆಡಳಿತವನ್ನು ಮೆಚ್ಚಿ ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನತೆ ಪಕ್ಷದ ಗೆಲುವಿಗೆ ಮತ ನೀಡಿದ್ದಾರೆ ಎಂದು ಲಕ್ಮೇಶ್ವರ ನಗರ ಘಟಕದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೀಶ ತೆಂಬದಮನಿ ಹೇಳಿದರು.
ಅವರು ಶನಿವಾರ ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ ಬಳಿಕ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು.
ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷದ ಮೇಲೆ ವಿನಾಕಾರಣ ಆರೋಪ ಮಾಡಿ ಪ್ರಚಾರ ಮಾಡಿದರೂ ಮತದಾರರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಪಕ್ಷದ ಗ್ಯಾರಂಟಿ ಯೋಜನೆಗಳ ಜತೆಗೆ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಜನ ಮನ್ನಣೆ ನೀಡಿದಂತಾಗಿದ್ದು, ಇನ್ನಾದರೂ ಬಿಜೆಪಿ ಸುಳ್ಳು ಆರೋಪ, ಅಪಪ್ರಚಾರ ಕೈಬಿಡಬೇಕು ಎಂದರು.
ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಕಾಂಗ್ರೆಸ್ ಪರ ಘೋಷಣೆ ಕೂಗಿದರು. ಈ ವೇಳೆ ಪಕ್ಷದ ಮುಖಂಡರಾದ ಪದ್ಮರಾಜ ಪಾಟೀಲ, ಸೋಮಣ್ಣ ಬೆಟಗೇರಿ, ಪುರಸಭೆ ಸದಸ್ಯ ಬಸವರಾಜ ಓದುನವರ, ನೀಲಪ್ಪ ಶರಸೂರಿ, ಯಲಪ್ಪ ಸೂರಣಗಿ, ಬಾಬಣ್ಣ ಅಳವಂಡಿ, ನಾಗರಾಜ ದೊಡ್ಡಮನಿ, ಇಸ್ಮಾಯಿಲ್ ಆಡೂರ, ನೀಲಪ್ಪ ಪಡಗೇರಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ಅಣ್ಣಪ್ಪ ರಾಮಗೇರಿ, ಶಿದ್ದಲಿಂಗಯ್ಯ ಪಶುಪತಿಮಠ, ಅಪ್ಜಲ್ ರಿತ್ತಿ, ಮಂಜಪ್ಪ ಶರಸೂರಿ, ಸೋಮಣ್ಣ ಲಮಾಣಿ, ನಂದೀಶ ಚಕ್ರಸಾಲಿ, ಹನುಮಂತ ಶರಸೂರಿ, ಎಂ.ಎA. ಗಾಡಗೊಳಿ, ರಿಯಾಜ ಡಾಲಾಯತ್ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು.