ಕಾಂಗ್ರೆಸ್ ಪಕ್ಷ 60 ಪರ್ಸೆಂಟ್ ಲಂಚ ಹೊಡೆದು ರಾಜ್ಯವನ್ನ ಲೂಟಿ ಮಾಡುತ್ತಿದೆ: ಆರ್ ಅಶೋಕ್

0
Spread the love

ಬೆಂಗಳೂರು: ಕಾಂಗ್ರೆಸ್​ ಪಕ್ಷ 60 ಪರ್ಸೆಂಟ್​ ಲಂಚ ಹೊಡೆದು ರಾಜ್ಯವನ್ನ ಲೂಟಿ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್​ ಅಶೋಕ್ ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿಟ್ವೀಟ್‌ ಮಾಡಿದ ಅವರು, 40 ಪರ್ಸೆಂಟ್​​ ಸರ್ಕಾರ ಎಂದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಪಕ್ಷ, 60 ಪರ್ಸೆಂಟ್​ ಲಂಚ ಹೊಡೆದು ರಾಜ್ಯವನ್ನ ಲೂಟಿ ಮಾಡುತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.

Advertisement

ನಗರಾಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಖಾಸಗಿ ಕಂಪನಿಯೊಂದು ಏಪ್ರಿಲ್ 22 ರಂದು ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಸರ್ಕಾರದ 60 ಪರ್ಸೆಂಟ್​ ಲಂಚಾವತಾರದ ಮುಖವಾಡವನ್ನು ಬಯಲು ಮಾಡಿದೆ”. ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರ ಸಂಘ ಬರೆದಿರುವ ಪತ್ರದಲ್ಲಿ 700 ಕೋಟಿ ರೂಪಾಯಿ ಲಂಚದ ಬಗ್ಗೆ ಆರೋಪ ಮಾಡಿದ್ದಾರೆ, ಈಗ ಖಾಸಗಿ ಕಂಪನಿಯೊಂದು 60 ಪರ್ಸೆಂಟ್​ ಕಮಿಷನ್ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.


Spread the love

LEAVE A REPLY

Please enter your comment!
Please enter your name here