ವಿಜಯಸಾಕ್ಷಿ ಸುದ್ದಿ, ಡಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆಯಿಲ್ಲ. ಒಂದೂವರೆ ವರ್ಷದಲ್ಲಿ ಈ ಕ್ಷೇತ್ರಕ್ಕೆ ತಂದ ಹಲವು ಅಭಿವೃದ್ಧಿ ಕಾಮಗಾರಿಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಹೋಬಳಿಯ ವೆಂಕಟಾಪೂರ ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ 70 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಯಕ್ಲಾಸಪೂರ ಗ್ರಾಮದ ಎಸ್‌ಸಿ ಕಾಲೋನಿಯಿಂದ ಹಳ್ಳದವರೆಗೆ 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಮುಜರಾಯಿ ಇಲಾಖೆಯಿಂದ 5 ಲಕ್ಷ ರೂ, ಪೇಠಾ ಆಲೂರ ಗ್ರಾಮದಲ್ಲಿ ಪಂಚಾಯತ ರಾಜ್ ಹಾಗೂ ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿ ವಿಭಾಗದಿಂದ 200 ಲಕ್ಷ ರೂ ಅನುದಾನದಲ್ಲಿ ಕೆರೆ ಸುಧಾರಣೆ ಕಾಮಗಾರಿ, 20 ಲಕ್ಷ ರೂ ವೆಚ್ಚದಲ್ಲಿ ಗೋವಿನಕೊಪ್ಪ ರಸ್ತೆಯಿಂದ ಶ್ರೀಹೊನ್ನಂತ್ಯಮ್ಮ ದೇವಾಸ್ಥಾನದವರೆಗೆ ಸಿಸಿ ರಸ್ತೆ, 13 ಲಕ್ಷ ರೂ ವೆಚ್ಚದ ಆಯುಷ್ ಆರೋಗ್ಯ ಯೋಗಾಸನ ಕಟ್ಟಡ ನಿರ್ಮಾಣ, ಡಂಬಳ ಗ್ರಾಮದಲ್ಲಿ 15 ಲಕ್ಷ ರೂ ಅನುದಾನದಲ್ಲಿ ಗುಡ್ಡದವರ ಮನೆಯಿಂದ ಸಿ.ಸಿ ರಸ್ತೆ, ಶಾಲೆಯ ಮುಂಭಾಗದ ರಸ್ತೆಯಲ್ಲಿ 16.50 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ, 100 ಲಕ್ಷ ರೂ ವೆಚ್ಚದಲ್ಲಿ ನೂತನ ಕೆರೆ-ಕಾಲುವೆ ಅಭಿವೃದ್ಧಿ ಕಾಮಗಾರಿ, 10 ಲಕ್ಷ ರೂ ವೆಚ್ಚದಲ್ಲಿ ಕರಿಶಿದ್ದೇಶ್ವರ ದೇವಸ್ಥಾನ, 5 ಲಕ್ಷ ರೂ ಅನುದಾನದ ಮಹಿಳಾ ಸಂಘದ ಕಟ್ಟಡ, ಜಂತ್ಲಿ-ಶಿರೂರ ಗ್ರಾಮದಲ್ಲಿ 80 ಲಕ್ಷ ರೂ ಸಿಸಿ ರಸ್ತೆ, 100 ಲಕ್ಷ ರೂ ವೆಚ್ಚದ ಕೆರೆ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಡಂಬಳ ಗ್ರಾಮದ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಗ್ರಾಮಗಳಲ್ಲಿ ರೈತರ, ಮಹಿಳೆಯರ, ಕೂಲಿಕಾರ್ಮಿಕರ ಸಮಸ್ಯೆಗಳನ್ನು ಶಾಸಕರು ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿ.ಆರ್. ಗುಡಿಸಾಗರ, ಡಿ.ಡಿ. ಮೋರನಾಳ, ಗುರಣ್ಣ ಕುರ್ತಕೋಟಿ, ಚೆನ್ನಪ್ಪ ಹಳ್ಳಿ, ಮಂಜುನಾಥ ಕಿನ್ನಾಳ, ಮಾಂತೇಶ ಮುಗಳಿ, ಗುರಣ್ಣ ಸಂಶಿ, ರಾಘು ಕುರಿಯವರ, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಜಿ.ಎಸ್. ಕೊರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಮಹೇಶ ಗಡಗಿ, ಮರಿಯಪ್ಪ ಸಿದ್ದನ್ನವರ, ಬಾಬು ಮೂಲಿಮನಿ, ಜಾಕೀರ ಮೂಲಿಮನಿ, ನಾಗರಾಜ ಯಳವತ್ತಿ, ಹಾಲಪ್ಪ ಕಬ್ಬೆರಳ್ಳಿ, ಹಾಲಪ್ಪ ಹರ್ತಿ, ಶಿವಾನಂದ ಚಾಕಲಬ್ಬಿ, ವಿಶ್ವನಾಥ ಪಾಟೀಲ, ರಾಜಕುಮಾರ ಪೂಜಾರ, ರವಿ ದೊಡ್ಡಮನಿ, ಹೇಮಣ್ಣ ಪೂಜಾರ, ಶೇಖಪ್ಪ ದೇಶಾಯಿ, ಶರಣಪ್ಪ ಶಿರುಂದ, ಹನಮಂತ ಪೂಜಾರ, ತಹಸೀಲ್ದಾರ ಯರಿಸ್ವಾಮಿ ಪಿ.ಎಸ್, ಇಒ ವಿಶ್ವನಾಥ ಹೊಸಮನಿ, ಕೃಷಿ ಅಧಿಕಾರಿ ಪ್ರಾಣೇಶ, ಮಂಜುನಾಥ ಕಲಬುರ್ಗಿ, ಸಣ್ಣ ನೀರಾವರಿ ಅಧಿಕಾರಿ ಪ್ರವೀಣಕುಮಾರ ಪಾಟೀಲ್, ಜಿ.ಪಂ ಅಭಿಯಂತರ ನಿಂಗಪ್ಪ ಬೇವಿನಮರದ, ಲೋಕೋಪಯೋಗಿ ಇಲಾಖೆಯ ನಾಗೇಂದ್ರ ಪಟ್ಟಣಶೆಟ್ಟರ, ಪಿಡಿಒ ಲತಾ ಮಾನೆ, ವಸಂತ ಗೋಕಾಕ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಗ್ರಾಮದ ಹಿರಿಯರು, ಯುವಕರು ಇದ್ದರು.
ಕಾಂಗ್ರೆಸ್ ಪಕ್ಷದ ಮುಖ್ಯ ಉದ್ದೇಶವೇ ಅಭಿವೃದ್ಧಿಯಾಗಿದೆ. ಕ್ಷೇತ್ರದ ಜನರ ದೂರದೃಷ್ಟಿ ಇಟ್ಟುಕೊಂಡು ಅಂತರ್ಜಲ ವೃದ್ಧಿ ಮಾಡುವುದು ಹಾಗೂ ಜನರಿಗೆ ಸಮರ್ಪಕ ರಸ್ತೆ ನಿರ್ಮಿಸಲಾಗುತ್ತಿದೆ. ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಹೋಗುವುದಿಲ್ಲ. ಏನೇ ಅಭಿವೃದ್ಧಿ ಕೆಲಸ ಆಗಬೇಕಾದರೂ ನಮ್ಮ ಗಮನಕ್ಕೆ ತಂದರೆ ಮಾಡಲಾಗುವುದೆಂದು ಶಾಸಕ ಜಿ.ಎಸ್. ಪಾಟೀಲ ಆಶ್ವಾಸನೆ ನೀಡಿದರು.