ನವದೆಹಲಿ: ಕ್ಷಮೆಯಾಚನೆ ಮಾಡದೆ ಇದ್ದರೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಉದಯಗಿರಿ ಕೋಮುಗಲಭೆ ವಿಚಾರವಾಗಿ ಮಾತನಾಡಿದ ಅವರು,
ಗಲಭೆಕೋರರು ಆರ್‌ಎಸ್‌ಎಸ್‌ನವರು ಎಂದು ಆರೋಪ ಮಾಡಿದ್ದಾರೆ. ಈಗ ಪ್ರಕರಣದಲ್ಲಿ ಯಾರು ಬಂಧಿತರು? ಅವರಿಗೆ ಬದ್ಧತೆ ಇದ್ರೆ, ನೈತಿಕತೆ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಕ್ಷಮೆಯಾಚನೆ ಮಾಡದೆ ಇದ್ದರೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕೋಮುಗಲಭೆಯಲ್ಲಿ ಬಿಜೆಪಿ ನಾಯಕರು ಇದ್ದಾರೆಯೇ ಎಂದು ಪ್ರಿಯಾಂಕ್ ಖರ್ಗೆಯವ್ರ ಫ್ಯಾಕ್ಟ್ ಚೆಕ್ ಸಂಸ್ಥೆ ಪರೀಕ್ಷೆ ಮಾಡಲು ಆ ಸಂಸ್ಥೆ ಸತ್ತಿದಿಯೋ, ಬದುಕಿದೆಯೋ? ಸುಳ್ಳು ಆರೋಪ ಮಾಡಿದ ಲಕ್ಷ್ಮಣ್ ವಿರುದ್ದ ಕ್ರಮ ಆಗಬೇಕು. ಈಗ ಬಂಧಿತರಾಗಿರುವ ಆರೋಪಿಗಳು ಆರ್‌ಎಸ್‌ಎಸ್‌ನವರಲ್ಲ ಎಂದು ಅರಿತುಕೊಳ್ಳಬೇಕು ಎಂದರು.



