ಕಾಂಗ್ರೆಸ್ ಅಧಿಕಾರದ ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಗುತ್ತದೆ: ಪ್ರಲ್ಹಾದ ಜೋಶಿ

0
Spread the love

ಹುಬ್ಬಳ್ಳಿ: ಭಾರತದಲ್ಲಿ ಯಾವುದೇ ಕಾಲಕ್ಕೂ ಬಿಜೆಪಿಯೇ ಬಲಿಷ್ಠವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ  ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಯಾವುದೇ ಕಾಲಕ್ಕೂ ಬಿಜೆಪಿಯೇ ಬಲಿಷ್ಠವಾಗುತ್ತದೆ. ಸದ್ಯ ಮೋದಿ ನಾಯಕತ್ವದಲ್ಲಿ ಪ್ರಬಲವಾಗಿದೆ. ಕೆಲವು ವರ್ಷಗಳ ನಂತರ ಮತ್ಯಾರೋ ಪ್ರಬಲ ನೇತಾರರು ಮುಂಚೂಣಿಗೆ ಬರುತ್ತಾರೆ. ಕಾಂಗ್ರೆಸ್ ಅಧಿಕಾರದ ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಹತಾಶೆಯಲ್ಲಿ ಕೇಂದ್ರದ ನಿರ್ಣಯಗಳನ್ನು ವಿರೋಧಿಸುತ್ತದೆ. ಮುಂದೆಯೂ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಹತಾಶೆಯಲ್ಲಿ ಕಾಂಗ್ರೆಸ್, “ಒಂದು ದೇಶ ಒಂದು ಚುನಾವಣೆ”ಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು. ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸುತ್ತಲೆ ಇದೆ. ಇದಕ್ಕೆ ಅವರಲ್ಲಿನ ಹತಾಶ ಮನಸ್ಥಿತಿಯೇ ಕಾರಣ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here