ಬೆಂಗಳೂರು:- ಯೂತ್ ಕಾಂಗ್ರೆಸ್ ಅಧ್ಯಕ್ಷರ ಕಡೆಯವರು ಎಂದು ವಿದ್ಯಾರ್ಥಿಯೊಬ್ಬನನ್ನು ಕಿಡಿಗೇಡಿಗಳು ಕಿಡ್ನಾಪ್ ಮಾಡಿರುವ ಆಘಾತಕಾರಿ ಘಟನೆ ಜರುಗಿದೆ.
ಕಿಡ್ನ್ಯಾಪ್ ಮಾಡಿದ್ದು ಅಲ್ಲದೇ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಕುರಿತು ವಿದ್ಯಾರ್ಥಿ ದೂರು ನೀಡಿದ್ದು, ಆರೋಪಿಗಳಿಗೆ ಹುಡುಕಾಡಲಾಗುತ್ತಿದೆ.
ಕಿಡ್ನಾಪ್ ಮಾಡಿ ಸುಲಿಗೆ ಮಾಡಿರುವ ಕುರಿತು ನಾಲ್ವರ ವಿರುದ್ಧ ಜೀವನ್ ಜೈನ್ ಎಂಬ ವಿದ್ಯಾರ್ಥಿ ಆರೋಪ ಮಾಡಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್, ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಸಾಲ ಪಡೆದಿದ್ದ. ಇವೆಂಟ್ ಒಂದರ ವಿಚಾರವಾಗಿ ಹಣ ಪಡೆದಿದ್ದ ಜೀವನ್ ನಂತರ ಕಾರಣಾಂತರದಿಂದ ಹಣ ಕೊಡಲು ಆಗದೆ ಒದ್ದಾಡುತ್ತಿದ್ದ.
ಲೇಟಾಗಿ ಹಣ ಕೊಟ್ಟಿದ್ದಕ್ಕೆ ಕಿಡ್ನಾಪ್ ಮಾಡಿ ಬೆದರಿಸಲಾಗಿದೆ. ನಾವು ನಲಪಾಡ್ ಹುಡುಗರು, ಹತ್ತು ಲಕ್ಷ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಆರು ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದಲ್ಲದೆ ಹತ್ತು ಲಕ್ಷದವರೆಗೆ ಕೊಡಬೇಕು ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿ ತಿಳಿಸಿದ್ದಾನೆ.