ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬುದ್ಧಿ ಇಲ್ಲದ ವರ್ತನೆ ತೋರುತ್ತಿದೆ: ಪ್ರಲ್ಹಾದ್ ಜೋಶಿ

0
Spread the love

ಹುಬ್ಬಳ್ಳಿ: ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್​ ಬುದ್ಧಿ ಇಲ್ಲದ ವರ್ತನೆ ತೋರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್​ ಬುದ್ಧಿ ಇಲ್ಲದ ವರ್ತನೆ ತೋರುತ್ತಿದೆ.

Advertisement

ಕಾಮನ್​ ಸೆನ್ಸ್ ಇಲ್ಲದವರಂತೆ ಕಾಂಗ್ರೆಸ್ ಸರ್ಕಾರ ವರ್ತಿಸಿದೆ. ಎಸ್​​ಐಟಿ ಮಾಡಿ ಅಂತ ಯಾರು ಹೇಳಿದ್ದರು ನಿಮಗೆ. ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ ಎಂದರು. ಇನ್ನೂ ವಿದೇಶದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎಸ್​​ಐಟಿ ಅಧಿಕಾರಿಗಳ ಮೇಲೆ ಕನಿಕರ ಮೂಡುತ್ತಿದೆ.

ಯಾರೋ ಹೇಳಿದ್ರು ಅಂತ ದೊಡ್ಡ ದೊಡ್ಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕೇಸ್ ಎನ್​​ಐಎಗೆ ಬರುವ ಸಾಧ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ‌ಎಸ್​​ಐಟಿ ಬಗ್ಗೆ ಹೈಕೋರ್ಟ್ ನೇತೃತ್ವದಲ್ಲಿ ಮೊದಲು ತನಿಖೆ ಆಗಬೇಕು. ಹಿಂದೂ ಧರ್ಮ ಸಂಸ್ಕೃತಿ ನಾಶ ಮಾಡಲು ಪ್ಲಾನ್ ಮಾಡಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here