ವಿಜಯಸಾಕ್ಷಿ ಸುದ್ದಿ, ಗದಗ : ವ್ಯಕ್ತಿ ತನ್ನ ಇತಿ-ಮಿತಿಗಳನ್ನು ಅರಿತು ಬದುಕನ್ನು ನಡೆಸಬೇಕು. ಅತಿ ಆಸೆ, ಹಪಾಹಪಿತನ ವ್ಯಕ್ತಿಯಲ್ಲಿ ಉದ್ವೇಗ, ಭಯ, ಗೊಂದಲಗಳನ್ನು ಸೃಷ್ಟಿಸಿ ಮಾನಸಿಕ ಒತ್ತಡಗಳನ್ನು ಉಂಟುಮಾಡುತ್ತದೆ. ಆಹಾರದಿಂದ ಆರೋಗ್ಯ ನಿರ್ಮಾಣವಾಗುತ್ತಿದ್ದು, ಬದಲಾದ ಜೀವನ ಶೈಲಿ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ. ವ್ಯಕ್ತಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞೆಯನ್ನು ಹೊಂದುವದು ಅಗತ್ಯವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಏರ್ಪಡಿಸಿದ್ದ `ಮಾಸದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಜಿ.ಬಿ. ಪಾಟೀಲ ಮಾತನಾಡಿ, ಮಾನಸಿಕ ಡಾ. ಚಂದ್ರಶೇಖರರು ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದರೂ ನಿರಂತರವಾಗಿ ರಾಜ್ಯದ ಎಲ್ಲ ಭಾಗಗಳ ವಿದ್ಯಾ ಸಂಸ್ಥೆಗಳಿಗೆ ಹೋಗಿ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ, ಪುಸ್ತಕಗಳ ವಿತರಣೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆಂದರು.
ಇದೇ ಸಂದರ್ಭದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ 6 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ. ಸಿ.ಆರ್. ಚಂದ್ರಶೇಖರರು ವೈದ್ಯರಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಳ್ಳದೇ ರೋಗಿಯ ಮನೆಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಿ ಜನಸಾಮಾನ್ಯರ ಮನೋವೈದ್ಯರಾಗಿದ್ದಾರೆ. 310ಕ್ಕೂ ಅಧಿಕ ಪುಸ್ತಕಗಳ ಮೂಲಕ ಅಂಗೈಯಲ್ಲಿ ಆರೋಗ್ಯವನ್ನು ನೀಡಿದ್ದಾರೆ ಎಂದರು.
ಸಂವಾದದಲ್ಲಿ ಡಾ. ರಾಜೇಂದ್ರ ಗಡಾದ, ಎ.ಎಸ್. ಮಕಾನದಾರ, ಪ್ರೊ. ಚಂದ್ರಶೇಖರ ವಸ್ತç ದ, ಪ್ರೊ. ಅನ್ನದಾನಿ ಹಿರೇಮಠ ಮೊದಲಾದವರು ಭಾಗವಹಿಸಿದ್ದರು. ಮಂಜುಳಾ ವೆಂಕಟೇಶಯ್ಯ ಆತಿಥ್ಯ ವಹಿಸಿದ್ದರು. ಮನೋವೈದ್ಯರಾದ ಡಾ. ವಿಜಯ ಹರವಿಶೆಟ್ಟರ, ಡಾ.ಸೋಮಶೇಖರ ಬಿಜ್ಜಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಚ್. ಬೇಲೂರ, ಮುಂಡರಗಿ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಶಿರಹಟ್ಟಿ ಕಸಾಪ ಅಧ್ಯಕ್ಷ ಎಸ್.ಬಿ. ಹೊಸೂರ, ಡಾ. ಕಾವೆಂಶ್ರೀ, ವಿಶ್ವನಾಥ ನಾಲವಾಡದ, ವೆಂಕಟೇಶ ಗುಡಿ, ಸತೀಶ ಕುಮಾರ ಚನ್ನಪ್ಪಗೌಡರ, ಶೇಖಣ್ಣ ಕಳಸಾಪುರಶೆಟ್ರು, ಡಾ. ಎಸ್.ಬಿ. ಶೆಟ್ಟರ, ಡಿ.ಎಸ್. ಬಾಪುರಿ, ಡಾ. ವಿಜಯದತ್ತ ವಿ.ಎಂ., ಚಿನ್ನವ್ವ ವಸ್ತçದ, ಶಿಲ್ಪಾ ಮ್ಯಾಗೇರಿ, ಅನಸೂಯಾ ಮಿಟ್ಟಿ, ಎಸ್.ಎಂ. ಕಾತರಕಿ, ಸುಧಾ ಬಳ್ಳಿ, ಶಾರದಾ ಬಾಣದ, ನೀಲಮ್ಮ ಅಂಗಡಿ, ರತ್ನಾ ಪುರಂತರ, ಭಾಗ್ಯಶ್ರೀ ಹುರಕಡ್ಲಿ, ಶಾಂತಲಾ ಹಂಚಿನಾಳ, ಶೈಲಜಾ ಗಿಡ್ನಂದಿ, ರಕ್ಷಿತಾ ಎಸ್ ಗಿಡ್ನಂದಿ, ಎಸ್.ಬಿ. ಸರ್ಜಾಪುರ, ಅಶೋಕ ಸತ್ಯರೆಡ್ಡಿ, ಎಸ್.ಎಫ್. ಭಜಂತ್ರಿ, ಎಸ್.ಎ. ಸೋಮಗೊಂಡ, ಡಾ. ಈರಣ್ಣ ಕೊರಚಗಾಂವ, ಬಸನಗೌಡಗೌಡರ, ಅಜಿತ ಘೋರ್ಪಡೆ, ಮೌನೇಶ ಬಡಿಗೇರ, ಮಲ್ಲಿಕಾರ್ಜುನ ಜಿ, ಜೆ.ಎ. ಪಾಟೀಲ, ಆರ್.ಡಿ. ಕಪ್ಪಲಿ, ಪ್ರತೋ ನಾರಾಯಣಪುರ, ಬಸವರಾಜ ವಾರಿ, ಕಾರ್ತಿಕ ಮುನವಳ್ಳಿ, ಸಿ.ಎಂ. ಮಾರನಬಸರಿ, ಪ್ರೊ. ಆಯ್.ಎಸ್. ಹಿರೇಮಠ, ಕೆ.ಜಿ. ವ್ಯಾಪಾರಿ, ಶರಣಪ್ಪ ಹೊಸಂಗಡಿ, ಎಸ್.ಆಯ್. ತಳವಾರ, ಬಿ.ಎ. ಸಾಲಿಯವರ, ವಿ.ಎಸ್. ದಲಾಲಿ, ಅಮರೇಶ ರಾಂಪೂರ ಮೊದಲಾದವರು ಭಾಗವಹಿಸಿದ್ದರು.
Advertisement
ಪ್ರಾಣಿಗಳಲ್ಲಿ ಆಸೆ-ಆಕಾಂಕ್ಷೆ ಮಿತವಾಗಿದೆ. ಆದರೆ ಮನುಷ್ಯರಲ್ಲಿ ಹಾಗಿಲ್ಲ. ಸಂಪತ್ತಿನ ಗಳಿಕೆ, ಕೀರ್ತಿ ಶನಿ, ಇನ್ನೂ ಬೇಕು ಎನ್ನುವ ಬಯಕೆಗಳು ಮಾನವನಲ್ಲಿ ಮಾನಸಿಕ ಕ್ಷೋಭೆಯನ್ನುಂಟು ಮಾಡುತ್ತಿವೆ. ಮನಸ್ಸಿನ ಹತೋಟಿ ಮೆದುಳಿನಿಂದ ನಡೆಯುತ್ತಿರುವದರಿಂದ ಹಾರ್ಮೋನುಗಳು ಅಗತ್ಯ ಪ್ರಮಾಣದಲ್ಲಿ ಶ್ರವಿಸುವಂತೆ ಮಾಡಬೇಕು. ಮನಸ್ಸನ್ನು ಆನಂದದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆಚರಣೆಗಳನ್ನು ಬದಲಾಯಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ, ಉಪಕಾರ, ದಯೆ, ಅನುಕಂಪ, ಪ್ರೀತಿ ತೋರುವಿಕೆಯ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.– ಡಾ. ಸಿ.ಆರ್. ಚಂದ್ರಶೇಖರ.ಖ್ಯಾತ ಮನೋವೈದ್ಯರು.