ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಹುಬ್ಬಳ್ಳಿಯಲ್ಲಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ನೀಲಕಂಠೇಶ್ವರ ಮಠದ ನಿರ್ಮಾಣಕ್ಕೆ ನರೇಗಲ್ಲದ ಕುರುಹಿನಶೆಟ್ಟಿ ಸಮಾಜ ಬಾಂಧವರು 25101ರೂ.ಗಳ ಕಾಣಿಕೆಯನ್ನು ಸಮರ್ಪಿಸಿದರು.
ಸ್ಥಳೀಯ ಈಶ್ವರ ದೇವಸ್ಥಾನದಲ್ಲಿ ಈ ಕುರಿತು ಚಂದಾ ಸಂಗ್ರಹಿಸಲು ಹುಬ್ಬಳ್ಳಿಯ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಜಗದ್ಗುರು ವೀರಭಿಕ್ಷಾವರ್ತಿ ನೀಲಕಂಠಮಠ ಹಳೆ ಹುಬ್ಬಳ್ಳಿ ಇವರು ಆಗಮಿಸಿದ ಸಂದರ್ಭದಲ್ಲಿ ಈ ದೇಣಿಗೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಮನಷ್ಯ ಶಾಂತಿ, ನೆಮ್ಮದಿಯಿಂದಿರಲು ಮಠ ಮಂದಿರಗಳಿಗೆ ಸೇವೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಮಂದಿರ ನಿರ್ಮಾಣಕ್ಕೆ ಮನಃಪೂರ್ವಕವಾಗಿ ನರೇಗಲ್ಲದ ಕುರುಹಿನಶೆಟ್ಟಿ ಸಮಾಜ ಬಾಂಧವರಿಂದ ದೇಣಿಗೆ ನೀಡಿದ್ದೇವೆ. ಇದನ್ನು ಪೂಜ್ಯರು ಸ್ವೀಕರಿಸಿ, ಆಶೀರ್ವದಿಸಬೇಕೆಂದರು.
ಆಶೀರ್ವಚನ ನೀಡಿದ ಶ್ರೀಗಳು, ಮನುಷ್ಯ ದಾನ, ಧರ್ಮಗಳ ಮೂಲಕ ದೊಡ್ಡವನಾಗುತ್ತಾನೆ. ತಾನು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ನೀಡಿದಾಗ ಅವನ ಬದುಕು ಸಾರ್ಥಕವಾಗುತ್ತದೆ. ನರೇಗಲ್ಲದ ಸದ್ಭಕ್ತರು ನೀಡಿರುವ ಈ ಕಾಣಿಕೆ ಅಪರೂಪದ್ದು. ಭಗವಂತ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಶೀರ್ವದಿಸಿದರು.
ದೇಣಿಗೆ ಸಂಗ್ರಹಿಸಲು ಶ್ರೀಗಳೊಂದಿಗೆ ಕಾರ್ಯದರ್ಶಿ ಎಂ.ಪಿ. ಶಿವಕುಮಾರ್, ಧಾರವಾಡ ಜಿಲ್ಲಾ ಕುರುಹಿನಶೆಟ್ಟಿ ಅಭಿವೃದ್ಧಿ ಸಂಘದ ಹುಬ್ಬಳ್ಳಿಯ ಗೌರವಾಧ್ಯಕ್ಷ ಎಂ.ಬಿ. ರೋಣದ, ವರುಣ ಸಂಗನಾಳ ಆಗಮಿಸಿದ್ದರು.
ಸಮಾರಂಭದಲ್ಲಿ ರಮೇಶ ಗೆದಗೇರಿ, ಶೇಕಪ್ಪ ಗೆದಗೇರಿ, ಶ್ರೀಕಾಂತ ಸಂಗನಾಳ್, ಮುತ್ತಣ್ಣ ಗೆದಗೇರಿ, ವೀರುಪಾಕ್ಷಪ್ಪ ಸಂಗನಾಳ್, ಸಣ್ಣಪ್ಪ ಹರ್ತಿ, ಕಾಶಪ್ಪ ಸಂಗನಾಳ, ಬಸವರಾಜ ಗೆದಗೇರಿ, ಶರಣಪ್ಪ ಮುಳಗುಂದ, ಮಲ್ಲಪ್ಪ ಸಮಗಂಡಿ, ಕಮಲಾಕ್ಷಿ ಸಂಗನಾಳ್, ವನಜಾಕ್ಷಿ ಸಂಗನಾಳ್, ವೀಣಾ ಸಂಗನಾಳ್, ರೇವತಿ ಸಂಗನಾಳ್, ಈರವ್ವ ಗೆದಗೇರಿ, ಸುಷ್ಮಾ ಗೆದಗೇರಿ ಮೊದಲಾದವರಿದ್ದರು.