ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ `ಸಂವಿಧಾನ ಸಮ್ಮಾನ ಸಮಾರಂಭ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ ಗದಗ ನಗರದ ಮುಳಗುಂದ ನಾಕಾದಲ್ಲಿರುವ ಶ್ರೀ ವಿಠಲಾರೂಢ ಕಲ್ಯಾಣ ಮಂಟಪದಲ್ಲಿ `ಸಂವಿಧಾನ ಸಮ್ಮಾನ ಸಮಾರಂಭ’ ಜರುಗಲಿದೆ.

Advertisement

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರು, ಹಾಲಿ ಶಾಸಕರಾದ ಸಿ.ಸಿ. ಪಾಟೀಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ, ಗದಗ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ.

ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಸಂವಿಧಾನ ಸಮ್ಮಾನ ಅಭಿಯಾನದ ಸಂಚಾಲಕರಾದ ನಾಗರಾಜ ಕುಲಕರ್ಣಿ, ರವಿ ದಂಡಿನ, ಪ್ರಮುಖರಾದ ರಮೇಶ ಸಜ್ಜಗಾರ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಪ್ಪ ರಂಗಪ್ಪನವರ, ಪ್ರಧಾನ ಕಾರ್ಯದರ್ಶಿ ಸುರೇಶ ಚಲವಾದಿ, ಮಲ್ಲು ಮಾದರ, ಗದಗ ನಗರ ಅಧ್ಯಕ್ಷ ಅನಿಲ ಅಬ್ಬಿಗೇರಿ, ವಾಯ್.ಪಿ. ಅಡ್ನೂರ, ಯಲ್ಲಪ್ಪ ಶಿರಿ, ಹನುಮಂತಪ್ಪ ದಿಂಡೆಣ್ಣವರ, ಅಶೋಕ ಕುಡತಿನಿ, ಉಡಚಪ್ಪ ಹಳ್ಳಿಕೇರಿ, ಲಕ್ಷö್ಮಣ ದೊಡ್ಡಮನಿ, ಮುತ್ತಣ್ಣ ಮೂಲಿಮನಿ, ಗುರು ಹೂಲಿ, ನಾಗರಾಜ ತಳವಾರ, ಪ್ರಶಾಂತ ನಾಯ್ಕರ, ಮಂಜುನಾಥ ತಳವಾರ, ಮಂಜುನಾಥ ಶಾಂತಗೇರಿ, ಸುರೇಶ ಮರಳಪ್ಪನವರ, ಸಂತೋಷ ಕಲ್ಯಾಣಿ, ನವೀನ ಕೊಟೆಕಲ್, ವಿನೋದ ಹಂಸನೂರ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here