ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಬಡವರ ಹಿತರಕ್ಷಣಾ ವೇದಿಕೆ ಗದಗ ಜಿಲ್ಲಾ ಸಂಘಟನೆ ವತಿಯಿಂದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಂ. ಅಣ್ಣಯ್ಯ ಅವರ ಆದೇಶದಂತೆ ಗದಗ–ಬೆಟಗೇರಿ ನಗರಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ದಿನ ಆಚರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ರವಿ ನಾಯಕ್, ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಪೂಜಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಆರಾಧನಾ ಬಣಕಾರ್, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷರಾದ ಅಯ್ಯಪ್ಪ ವಾಲ್ಮೀಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರ್ಮಣ್ಣ ತಳವಾರ್, ತಾಲೂಕು ಅಧ್ಯಕ್ಷರಾದ ಇದ್ರೀಸ್ ಮುಲ್ಲಾ, ವಿನಾಯಕ ಅಂಜಿಗಿ, ಸಲೀಂ ಬೋದ್ಲೇಖಾನ್, ಆನಂದ್, ಪ್ರಜ್ವಲ್ ಪೂಜಾರ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


