ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಯಿಲಗೋಳ ನಾರಾಯಣ್ ರಾವ್ (ಟಾಂಗಾಕೂಟ) ವೃತ್ತದಲ್ಲಿ ಸಮತಾ ಸೇನಾ ಗದಗ ಜಿಲ್ಲಾ ವತಿಯಿಂದ ಸಮತಾ ಸೇನಾ ಗದಗ ಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ನೇತೃತ್ವದಲ್ಲಿ 5ನೇ ವರ್ಷದ ಸಂವಿಧಾನ ಸಮರ್ಪಣಾ ದಿನವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಎನ್. ಬಳ್ಳಾರಿ, ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ ಮುಳಗುಂದ, ಹುಬ್ಬಳ್ಳಿ ಲಿಡಕರ್ ಕಾಲೋನಿ ಅಧ್ಯಕ್ಷ ಲೋಹಿತ ಗಾಮನಗಟ್ಟಿ ಸಂವಿಧಾನ ಪೀಠಿಕೆಗೆ ಪುಷ್ಪಾರ್ಪಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಮಾರುತಿ ಎಸ್. ಜೋಗದಂಡಕರ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಸಿಂಡಿಕೇಟ್ ಸದಸ್ಯ ಮೋಹನ ಭಜಂತ್ರಿ, ಪೊಲೀಸ್ ಅಧಿಕಾರಿಗಳಾದ ಲಾಲಸಾಬ ಜೂಲಕಟ್ಟಿ, ಗದಗ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ರೇಣುಕಾ ಮುಂಡೇವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮತಾ ಸೇನಾ ಸಂಘಟನೆಯ ವತಿಯಿಂದ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಮತಾ ಸೇನಾ ಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ಹಾಗೂ ಗಣ್ಯರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮತಾ ಸೇನಾ ಉಪಾಧ್ಯಕ್ಷ ಮಂಜುನಾಥ ಕೊರವರ, ಮುಖಂಡರುಗಳಾದ ಪರಶುರಾಮ ಪೂಜಾರ, ಸತೀಶ ಹೂಲಿ, ರೇವಣಸಿದ್ದಪ್ಪ ಹೊಸಮನಿ, ಬಾಲರಾಜ ಅರಬರ, ಕುಮಾರ ಮಾರನಬಸರಿ, ವೆಂಕಟೇಶ ಬಳ್ಳಾರಿ, ದಶರಥ ಅಗಸಿಮನಿ, ಪ್ರಕಾಶ ಹೊನಕೇರಿ, ಗೋಪಾಲ ಅಗಸಿಮನಿ, ಶ್ರೀಧರ ಅಗಸಿಮನಿ, ವಿಜಯ ಗಾಮನಗಟ್ಟಿ, ಪರಶುರಾಮ ಲಕ್ಕುಂಡಿ, ದುರಗಪ್ಪ ವಿಭೂತಿ, ಪ್ರದೀಪ ಹಾದಿಮನಿ, ವಿನಾಯಕ ಹೊಸಳ್ಳಿ, ರಮೇಶ ಬೆಣಗಿ, ಮಂಜುನಾಥ ದೊಡ್ಡಮನಿ, ಸತೀಶ ಮಂಡಲಗಿರಿ, ಪ್ರಕಾಶ ಉಳ್ಳಿಕಾಶಿ, ಹೊನ್ನಪ್ಪ ಸಾಕಿ, ರಮೇಶ ತೇರದಾಳ, ನಿಂಗಪ್ಪ ತೇರದಾಳ, ಸುರೇಶ ಬೆಳವಡಿ, ರುದ್ರೇಶ ಗಂಗಾವತಿ, ಇಮ್ತಿಯಾಜ್ ಕಳಸಾಪೂರ, ಸಂತೋಷ ಬಣಕಾರ, ಸಂತೋಷ ಕವಲೂರ, ಮಂಜುನಾಥ ಶಹಾಪೂರ, ರೋಹನ್, ಪ್ರವೀಣ, ಅಣ್ಣಪ್ಪ ಉಳ್ಳಿಕಾಶಿ ಮುಂತಾದವರು ಉಪಸ್ಥಿತರಿದ್ದರು.



