ಬೆಂಗಳೂರು:– ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮಣ್ಣು ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಕೋರಮಂಗಲದ ಸಿದ್ದಾರ್ಥ ಕಾಲೋನಿಯಲ್ಲಿ ನಡೆದಿದೆ.
Advertisement
33 ವರ್ಷದ ಲಾಲ್ ಮದನ್, 35 ವರ್ಷದ ರಜಾವುದ್ದೀನ್ ಮೃತರು. ಘಟನೆಯಲ್ಲಿ 28 ವರ್ಷದ ಸೈಫುಲ್ಲಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ಇಲ್ಲಿ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದೆ. ಇಂದು ಪಿಲ್ಲರ್ ನಿರ್ಮಾಣ ಮಾಡಲು ಸುಮಾರು ಇಪ್ಪತ್ತು ಅಡಿಯಷ್ಟು ಆಳಕ್ಕೆ ಮಣ್ಣು ತೆಗೆಯಲಾಗಿತ್ತು. ಈ ಜಾಗದಲ್ಲಿ ಸುಮಾರು ಎಂಟು ಜನ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಜನರ ಮೇಲೆ ಮಣ್ಣು ಕುಸಿದಿದ್ದು, ಮೂವರು ಮಣ್ಣಿನ ಅಡಿ ಸಿಲುಕಿದ್ದಾರೆ.
ರಕ್ಷಣಾ ಕೆಲಸ ಮಾಡುವಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಪಾರಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.