ಸೈನಿಕ ಭವನ ನಿರ್ಮಾಣ ಶೀಘ್ರದಲ್ಲಿ ಪೂರ್ಣ: ಜಿ.ಬಿ. ಮಾಲಗಿತ್ತಿಮಠ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೈನಿಕ ಸಮುದಾಯ ಭವನ ಹಾಗೂ ಸೈನಿಕ ತರಬೇತಿ ಕೇಂದ್ರದ ಕಟ್ಟಡವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕೆ ಎಲ್ಲ ಮಾಜಿ ಸೈನಿಕರು, ವೀರನಾರಿಯರು ಸಹಕಾರ ನೀಡಬೇಕೆಂದು ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ಮನವಿ ಮಾಡಿಕೊಂಡರು.

Advertisement

ಅವರು ಸಂಘದ ಕಾರ್ಯಾಲಯದಲ್ಲಿ ಜರುಗಿದ ಮಾಸಿಕ ಸಭೆ, ಮಾಜಿ ಸೈನಿಕರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಸೇವಾ ನಿವೃತ್ತ ಸೈನಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡ ಮಾಜಿ ಸೈನಿಕರ ಮಕ್ಕಳಾದ ವರ್ಷಿತಾ ಬಳ್ಳಾರಿ, ಹರ್ಷಾ ಮಡಿವಾಳರ, ನಾಗರಾಜ ಸೋಗಿಹಾಳ, ಮೇಘಾ ಹೊಸಮನಿ ಸೈಯದ್‌ಶಫಿ ಹಖ್, ಆಕಾಶ ಬಸವರೆಡ್ಡಿ, ರವೀಂದ್ರನಾಥ ಮಡಿವಾಳರ ಹಾಗೂ ಪ್ರಾನ್ಸ್ ದೇಶದಲ್ಲಿ ಎಂ.ಎಸ್ ಇಂಜಿನಿಯರಿಂಗ್‌ದಲ್ಲಿ ಉನ್ನತ ಸ್ಥಾನ ಪಡೆದು ಅಲ್ಲಿಯೇ ದಂಪತಿ ಸಮೇತ ಸೇವೆ ಸಲ್ಲಿಸುತ್ತಿರುವ ನೀಲಪ್ಪ ಬಿಂಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೆಶಕರಾದ ಎಸ್.ಬಿ. ಸರ್ವಿ, ಬಿ.ವ್ಹಿ. ಅಬ್ಬಿಗೇರಿ, ವ್ಹಿ.ಬಿ. ಬಿಂಗಿ, ಕೆ.ಎಸ್. ಹಿರೇಮಠ, ಬಸನಗೌಡ ಪಾಟೀಲ, ಶಂಕರಗೌಡ ಪಾಟೀಲ, ಸೈಯದ್‌ಮೊಯಿನುಲ್ ಹಖ್, ಯಲ್ಲಪ್ಪ ಮಾದರ, ಎಸ್.ಎನ್. ಮಡಿವಾಳರ, ರಾಮಲಿಂಗ, ಎನ್.ಎಚ್. ಕಂಬಳಿ, ಅಲ್ಲಾಸಾಬ ಕೊತಬಾಳ, ಎನ್.ಎಸ್. ಸಂಭಾಪೂರ, ಜಿ.ಬಿ. ಅರವಟಗಿಮಠ, ಈರಣ್ಣ ತಳ್ಳಿಕೇರಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಲಲಿತಾ ಕುರಹಟ್ಟಿ, ಅನಸೂಯಾ ಹಾವಕ್ಕನವರ, ಲಲಿತಾ ಬಳ್ಳಾರಿ, ನೀಲಾ ಸೋಗಿಹಾಳ, ಮೀನಾಕ್ಷಿ ಬದಿ, ರೇಣುಕಾ ಮರಡಿ, ಭಾರತಿ ಬಸವರಡ್ಡಿ, ಗೀತಾ ಹೊಸಮನಿ ಮುಂತಾದವರು ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿ.ಜಿ. ಸೊನ್ನದ ವಂದಿಸಿದರು.

 

ಹಿಮಾಚಲ ಪ್ರದೇಶದ ಮನಾಲಿಯ ಪರ್ವತವನ್ನು 1570 ಅಡಿ ಎತ್ತರದವರೆಗೆ ಯಶಸ್ವಿಯಾಗಿ ಏರಿದ ಗದುಗಿನ ಎನ್.ಸಿ.ಸಿ ವಿದ್ಯಾರ್ಥಿ ಗುರುಪ್ರಸಾದ ಸೊನ್ನದ ಹಾಗೂ ಸೇನೆಯಲ್ಲಿ ಸೇವೆಗೈದು ನಿವೃತ್ತರಾದ ಸಿದ್ದಪ್ಪ ಯಲ್ಲಪ್ಪಗೌಡರ, ಸಿದ್ಧನಗೌಡ ಹಿರೇಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here