ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸಂಭಾಪೂರ ರಸ್ತೆಯಲ್ಲಿರುವ ಶ್ರೀ ಪಂಡಿತ ಪುಟ್ಟರಾಜ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಶ್ರೀ ಮಾರುತಿ ದೇವಸ್ಥಾನದ ನೂತನ ಗೋಪುರ ನಿರ್ಮಾಣಕ್ಕೆ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪೂಜ್ಯಶ್ರೀ ಕಲ್ಲಯ್ಯಜ್ಜರು ಚಾಲನೆ ನೀಡಿದರು.
ಶ್ರೀ ಅನ್ನಪೂರ್ಣೇಶ್ವರಿ ಮಂದಿರದ ಧರ್ಮದರ್ಶಿಗಳಾದ ಪೂಜ್ಯಶ್ರೀ ಮಹೇಶ್ವರ ಸ್ವಾಮಿಗಳು ಹೊಸಳ್ಳಿ ಮಠ ಸಾನ್ನಿಧ್ಯ ವಹಿಸಿದ್ದರು. ಶ್ರೀ ಸಿದ್ದಿವಿನಾಯಕ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಉಮೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಟಿ.ವಿ. ಮಾಗಳದ, ಗುತ್ತಿಗೆದಾರ ಆಂಜನೇಯ ಕಟಗಿ, ಎಸ್.ಆರ್. ಪಾಟೀಲ, ಬಿ.ಎಲ್. ತಮ್ಮನಗೌಡ್ರ, ಎಲ್.ಎಸ್. ಬೆಳವಟಗಿ, ಜಿ.ಡಿ. ಗೊರವರ, ಎಸ್.ಬಿ. ಮೇಟಿ, ಪಿ.ಜಿ. ಚವಡಿ, ಎಸ್.ವಿ. ಹಿರೇಮಠ, ಎಸ್.ಐ. ಪವಾಡಶೆಟ್ಟರ, ರಾಜಣ್ಣ ಗೌಡರ, ಬಿ.ಕೆ. ಸಪರದ, ಬಸಣ್ಣ ಶಲವಡಿ, ಬಾಪುಗೌಡ ಮಲ್ಲನಗೌಡರ, ಎಸ್.ಐ. ಮೇಟಿ, ಎಸ್.ಎಫ್. ಸಂಕಣ್ಣವರ, ಡಿ. ಚಿತ್ರಗಾರ, ಜಿ.ಎಸ್. ಸುಳ್ಳದ, ಎಚ್.ಎಫ್. ಪಾಟೀಲ, ಬಿ.ಎಸ್. ಹುಲಗೂರ, ಮಲ್ಲಪ್ಪ ಬೂಳಿ, ಎಸ್.ಎ. ಗದುಗಿನ, ವೈ.ಸಿ. ಕಲಬುರ್ಗಿ, ಮಂಜುನಾಥ ಕುರಿಯವರ, ಎಂ.ಸಜ್ಜನ, ವಿ.ವಿ. ಕೌತಾಳ, ಮಂಡಲಗೇರಿ, ಬಿ.ಎಚ್. ರೋಣದ, ರಮೇಶ ಪಾಟೀಲ, ವಿ.ಬಿ. ಮರಿಗೌಡರ, ಮಲ್ಲಿಕಾರ್ಜುನಗೌಡ ಬಂಡಿ, ಬಸಯ್ಯ ಆರಾಧ್ಯಮಠ, ಶಿವಪ್ಪ ಕಂಕಣಮೇಟಿ, ಪ್ರಕಾಶ ಭಂಡಿ, ಸೋಮು ಅಂಗಡಿ, ಕೆ.ಎ. ಉಪ್ಪಿನ, ಡಿ.ಜಿ. ಬಳ್ಳೋಳ್ಳಿ, ರಮೇಶ ಕಾಂಬಳೆ, ಸೂರ್ಯವಂಶಿ, ಗಣೇಶ ಬನ್ನಿಗೋಳ, ಎ.ದೊಡ್ಡಕುಂದಿ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶ್ರೀದೇವಿಯ ಪುರಾಣ ಮಂಗಳ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ ಪ್ರಸಾದಸೇವೆ ಜರುಗಿತು. ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಹಾಗೂ ಪುಟ್ಟರಾಜ ನಗರದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.



