ವಿಜಯಸಾಕ್ಷಿ ಸುದ್ದಿ, ಮುಳಗುಂದ : ಶಾಲೆ, ಕಾಲೇಜುಗಳಲ್ಲಿ ಗ್ರಾಹಕರ ಕ್ಲಬ್ ರಚಿಸುವುದರಿಂದ ಮಕ್ಕಳ ಭಾವೀ ಜೀವನಕ್ಕೆ ಸಹಕಾರಿಯಾಗುವುದು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಗೋಲಪ್ಪನವರ ಹೇಳಿದರು.
ಅವರು ಸಮೀಪದ ನಾಗಾವಿ ಗ್ರಾಮದ ದಿ.ವಿರುಪಾಕ್ಷಪ್ಪ ಸೋಮಪ್ಪ ಚಿಂಚಲಿ ಉನ್ನತೀಕರಿಸಿದ ಸರಕಾರಿ ಪ್ರೌಢಶಾಲೆಯಲ್ಲಿ ೨೦೨೩/೨೪ನೇ ಸಾಲಿನ ಗ್ರಾಹಕರ ಕ್ಲಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಿತ್ಯ ಜೀವನದಲ್ಲಿ ವಿದ್ಯುತ್, ನೀರು, ಗ್ಯಾಸ್, ಆಹಾರ ಪದಾರ್ಥ, ಔಷಧಿ, ತರಕಾರಿ ಇನ್ನಿತರ ವಸ್ತುಗಳ ಖರೀದಿ ಸಂದರ್ಭದಲ್ಲಿ ಕೆಲಸ-ಕಾರ್ಯಗಳಿಗೆ ತೆರಳಿದಾಗ ಮೋಸ, ವಂಚನೆ ಒಳಗಾಗುವ ಸಾಧ್ಯತೆ ಇರುತ್ತದೆದಿದರಿಂದ ಪಾರಾಗುವ ಕಾಯ್ದೆಗಳ ಬಗ್ಗೆ ಗ್ರಾಹಕರ ಕ್ಲಬ್ ತಿಳಿಸಿಕೊಡುತ್ತದೆ. ಆದುದರಿಂದ ಗ್ರಾಹಕರ ಕ್ಲಬ್ ತುಂಬಾ ಅವಶ್ಯಕವಾಗಿದೆ ಎಂದರು.
ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಯಶೋಧಾ ಪಾಟೀಲ ಮಾತನಾಡಿ, ಗ್ರಾಹಕರಿಗಾಗುವ ವಂಚನೆ, ಮೋಸ ಪರಿಹರಿಸಲೆಂದೇ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಮಕ್ಕಳು ಖರೀದಿಯ ಸಂದರ್ಭದಲ್ಲಿ ಎಚ್ಚರ ವಹಿಸಬೇಕು ಎಂದರು.
ಶಾಲಾ ಪ್ರಧಾನ ಗುರು ಜಯಶ್ರೀ ಏಕಬೋಟೆ, ಯಶೋಧಾ ಪಾಟೀಲ್, ರಾಜು ಖೇತ್ರಿ, ಜೆ.ಎಂ. ಮುತ್ತಿನಪೆಂಡಿಮಠ, ಎ.ಎ. ಬಂಡಿವಾಡಮಠ, ವಿ.ಎಂ. ಖ್ಯಾಡದ, ಎಂ.ಎA. ಬಾಗಲಿ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.