ಕಲುಷಿತ ನೀರು ಸೇವನೆ: ರಾಯಚೂರಿನಲ್ಲಿ 30 ಜನ ಅಸ್ವಸ್ಥ!

0
Spread the love

ರಾಯಚೂರು: ಸಿಂಧನೂರು ತಾಲೂಕಿನ ಭೂತಲದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30 ಜನರು ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ. ಟ್ಯಾಂಕರ್​ನಿಂದ​ ಪೂರೈಕೆಯಾದ ನೀರು ಕುಡಿದ ಪರಿಣಾಮ ಈ ಅವಘಡ ಸಂಭವಿಸಿದೆ.

Advertisement

ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿದರು. ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಸ್ವಚ್ಛಗೊಳಿಸದೆ ನೀರು ಪೂರೈಕೆ ಮಾಡಿರುವ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿ ವಿರುದ್ಧ ಭೂತಲದಿನ್ನಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here