ಬೆಂಗಳೂರು:-ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್ ಗಳ ಪರ ಫ್ಯಾನ್ಸ್ ಪೇಜ್ ತೆರೆದವರಲ್ಲಿ ಹೆಚ್ಚು ಅಪ್ರಾಪ್ತರೇ ಎಂದು ತಿಳಿದು ಬಂದಿದೆ. ಸಿಸಿಬಿ ಜಂಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆದಿದ್ದು, ಎಲ್ಲ ಪೇಜ್ಗಳ ಅಡ್ಮಿನ್ ಬಹುಪಾಲು ಅಪ್ರಾಪ್ತ ಬಾಲಕರು ಎಂಬುವುದು ಆಘಾತಕಾರಿ ಅಂಶವಾಗಿದೆ.
ಸಿಸಿಬಿ ಅಧಿಕಾರಿಗಳು ಪೇಜ್ ಅಡ್ಮಿನ್ ಅಪ್ರಾಪ್ತ ಬಾಲಕರು ಮತ್ತು ಅವರ ಪೋಷಕರನ್ನು ಕಚೇರಿಗೆ ಕರೆಸಿ “ಪೋಷಕರಿಗೆ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದರು. ಹಾಗೆ ಬಾಲಕರಿಗೆ ಪೇಜ್ಗಳನ್ನು ಬಂದ್ ಮಾಡುವಂತೆ ಹೇಳಿದರು. ಅಲ್ಲದೆ ಇನ್ಮುಂದೆ ಇಂತಹ ಕೆಲಸ ಮಾಡದಂತೆ” ಎಚ್ಚರಿಕೆ ನೀಡಿದರು. ಇದೇ ವೇಳೆ ಅಧಿಕಾರಿಗಳು ಸುಮಾರು 60 ಹೆಚ್ಚು ಸಾಮಾಜಿಕ ಜಾಲತಾಣದ ಅಕೌಂಟ್ಗಳನ್ನು ಬಂದ್ ಮಾಡಿಸಿದರು.
ಬಾಲಕರಿಗೆ ರೌಡಿಶೀಟರ್ಗಳ ಸಂಪರ್ಕ ಹೇಗೆ
ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನಿಲ್, ಕುಣಿಗಲ್ ಗಿರಿ ಸೇರಿದಂತೆ ಹಲವಾರು ರೌಡಿಗಳ ಶಿಷ್ಯರು ಬಾಲಕರನ್ನು ಸಂಪರ್ಕಿಸುತ್ತಾರೆ. ಬಾಲಕರಿಗೆ ಇನ್ಸ್ಟಾಗ್ರಾಮ್ನಲ್ಲಿ ಖಾತೆ ತೆರೆಯುವಂತೆ ಹೇಳುತ್ತಾರೆ. ಬಳಿಕ ರೌಡಿಶೀಟರ್ಗಳ ವಿಡಿಯೋಗಳನ್ನು ಅವರಿಗೆ ನೀಡಿ ಎಡಿಟ್ ಮಾಡಿ ಪೇಜ್ನಲ್ಲಿ ಹಾಕುವಂತೆ ಸೂಚಿಸುತ್ತಾರೆ.
ಬಾಲಕರು N BOSS, S BOSS, C BOSS ಅಂತ ಪೇಜ್ ತೆರಯುತ್ತಿದ್ದರು. ಬೆಂಗಳೂರು ಡಾನ್, ಅಂಡರ್ ವಲ್ಡ್ ಡಾನ್, ಅಂತ ಬಿಲ್ಡಪ್ ಕೊಟ್ಟು ಪೇಜ್ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಬೆಂಕಿ, ಲಾಂಗು ಮಚ್ಚು ಎಫೆಕ್ಟ್ಗಳನ್ನ ಹಾಕಿ ಸಿನಿಮಾ ಸ್ಟೈಲ್ನಲ್ಲಿ ರೌಡಿಗಳಿಗೆ ಬಿಲ್ಡಪ್ ಕೊಡುತ್ತಿದ್ದರು. ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿ ಶಿಷ್ಯಂದಿರು ಬಾಲಕರಿಗೆ 500 ರೂ. ನೀಡುತ್ತಿದ್ದರು. ಸಾಮಾಜದಲ್ಲಿ ರೌಡಿಗಳ ಹವಾ ಏನೆಂದು ತೋರಿಸುವ ಕಾರಣಕ್ಕೆ ಹೀಗೆ ಮಾಡಿಸುತ್ತಿದ್ದರು.