ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಂಟೈನರ್: ಇಬ್ಬರು ಸಾವು, ನಾಲ್ವರು ಗಂಭೀರ

0
Spread the love

ಬೆಂಗಳೂರು:- ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸಿದ್ದಯ್ಯನದೊಡ್ಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

Advertisement

ಶ್ರೀಮಾನ್(25), ಶ್ರೀನಿವಾಸ್(28) ಮೃತ ದುರ್ದೈವಿಗಳು. ಸದ್ಯ ಕ್ರೇನ್​ನಿಂದ ಮೃತದೇಹಗಳನ್ನ ಪೊಲೀಸರು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಜಿಗಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಳಿಜಾರಿನ ತಿರುವಿನಲ್ಲಿ ಅತಿವೇಗವಾಗಿ ಬಂದ ಕಂಟೈನರ್, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಬೆಳಿಗ್ಗೆ 11ಗಂಟೆಯ ಸುಮಾರಿಗೆ ಅವಘಡ ನಡೆದಿದೆ. ಯಲಹಂಕದಲ್ಲಿರುವ Jd ಎಂಟರ್ಪ್ರೈಸಸ್​​ಗೆ ಸೇರಿದ ಕಂಟೈನರ್​ನಲ್ಲಿ ರಸ್ತೆಯ ಕೇಬಲ್ ಡ್ರೀಲಿಂಗ್ ಮಿಷನ್ ತುಂಬಿತ್ತು.

ಕಂದಕ್ಕೆ ಉರುಳಿ ವಾಹನದ ಕೆಳಗೆ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಜಿಗಣಿಯ ವಿಜಯಶ್ರೀ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಕ್ಯಾಂಟರ್ ಕೆಳಗೆ ಸಿಲುಕಿದ್ದ ಮೃತದೇಹಗಳನ್ನು ಸದ್ಯ ಎರಡು ಕ್ರೇನ್ ನೆರವಿನಿಂದ ಹೊರ ತೆಗೆಯಲಾಗಿದೆ. ಮೃತ ಶ್ರೀನಿವಾಸ್ ಕ್ಯಾಂಟರ್ ಚಾಲಕನಾಗಿದ್ದ. ಮೃತ ಶ್ರೀಮಾನ್ ಕೇಬಲ್ ಡ್ರಿಲ್ಲಿಂಗ್ ‌ಮಿಷನ್ ಆಪರೇಟರ್ ಆಗಿದ್ದ.

ಇನ್ನು ಸ್ಥಳಕ್ಕೆ ಡಿವೈಎಸ್​​ಪಿ ಮೋಹನ್‌ ಕುಮಾರ್, ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್​​ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here