ಹಾವೇರಿ: ಮಳೆಯ ಆರ್ಭಟ ಹಾವೇರಿಯಲ್ಲಿ ಮುಂದುವರೆದಿದೆ. ಧಾರಾಕಾರವಾಗಿ ಸುರಿಯುತ್ತಿರೋ ಮಳೆಯಿಂದ ಹಾವೇರಿ ತಹಸೀಲ್ದಾರ ಕಚೇರಿ ಸೋರುತ್ತಿದೆ.
Advertisement
ಇದರಿಂದ ಸಿಬ್ಬಂದಿಗಳು ಜೀವಭಯದಲ್ಲೆ ಸೋರುತ್ತಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾರೆ. ತಹಸೀಲ್ದಾರ ಕಚೇರಿ ದಾಖಲೆಗಳು ಮಳೆ ನೀರಿನಿಂದ ಹಾಳಾಗುತ್ತಿವೆ. ಸಿಬ್ಬಂದಿಗಳು ಕೆಲಸ ಮಾಡಲಾಗದೆ ಹೈರಾಣಾಗಿದ್ದಾರೆ.
ಕಳೆದ ವರ್ಷ ಮಳೆಗಾಳದಲ್ಲಿ ಹಾವೇರಿಗೆ ಬೇಟಿ ನೀಡಿದ್ದ ಸಿಎಂ ಸೋರುತ್ತಿರುವ ಕಟ್ಟಡವನ್ನ ಸರಿಪಡಿಸಲು ಸೂಚನೆ ಕೊಟ್ಟಿದ್ದರೂ ಡೊಂಟ್ ಕೇರ್ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಜನಪ್ರತಿನಿಧಿಗಳು.
ಗಾಂಧಿ ವೃತ್ತದಲ್ಲಿರುವ ಹಳೆ ಕೋಟ್೯ ಕಟ್ಟಡಕ್ಕೆ ತಹಸೀಲ್ದಾರ ಕಚೇರಿ ಸ್ಥಳಾಂತರಿಸಲು ಜನರು ಒತ್ತಾಯ ಮಾಡಿದ್ದಾರೆ. ಕಟ್ಟಡ ಸ್ಥಳಾಂತರ ಮಾಡದಿದ್ರೆ ಧರಣಿ ಮಾಡುವ ಎಚ್ಚರಿಕೆ ಕೂಡ ಜನರು ನೀಡಿದ್ದಾರೆ.