ಬೆಳಗಾವಿ:- ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದ್ದು, ಕನ್ನಡ ಮಾತಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲೂಕು ಉಪಾಧ್ಯಕ್ಷನಿಗೆ ಥಳಿಸಿರುವ ಘಟನೆ ನಡೆದಿದೆ.
ಇತ್ತೀಚೆಗೆ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ.
ಖಾನಾಪುರ ತಾಲೂಕು ಕರವೇ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ಹಲ್ಲೆ ಮಾಡಲಾಗಿದೆ. ಕನ್ನಡ ಮಾತಾಡಿದ್ದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಕ್ರಾಸ್ ಬಳಿಯ ಹೊಟೇಲ್ ನಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಖಾನಾಪುರ ತಾಲೂಕು ಕರವೇ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಅವರ ಮೇಲೆ ಮಾರಾಠಿ ಯುವರು ರಕ್ತ ಬರುವಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಗೊಂಡ ಕರವೇ ಮುಖಂಡನನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.