ಮುಂದುವರೆದ ಧಾರಾಕಾರ ಮಳೆ: ನಾಲ್ಕು ಸೇತುವೆಗಳು ಜಲಾವೃತ

0
Spread the love

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಧಾರಾಕಾರ ಮಳೆ ಹಿನ್ನೆಲೆಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.  ಸುಣಧೋಳಿ – ಮೂಡಲಗಿಗೆ ಸಂಪರ್ಕ ಕಲ್ಪಿಸುವ  ಬ್ರಿಡ್ಜ್ ಕಮ್ ಬ್ಯಾರೇಜ್, ಅವರಾದಿ- ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಮ್ ಬ್ಯಾರೇಜ್, ಕಮಲದಿನ್ನಿ – ಹುಣಶ್ಯಾಳ ಪಿವೈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಮ್ ಬ್ಯಾರೇಜ್,

Advertisement

ವಡೆರಹಟ್ಟಿ  – ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತಗೊಂಡಿವೆ. ನಾಲ್ಕು ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿ ಗೇಟ್ ಹಾಕಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ‌ ಮಾಡಲಾಗಿದೆ. ಪ್ರವಾಹ ಎದುರಾಗುವ ಭೀತಿಗೆ ನದಿ ದಡದಲ್ಲಿರುವ  ಪಂಪ್ಸೆಟ್ಟುಗಳನ್ನು ರೈತರು ತೆಗೆಯುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here