ಅಗತ್ಯವುಳ್ಳವರು ನೇತ್ರ ತಪಾಸಣೆ ಮಾಡಿಸಿಕೊಳ್ಳಿ : ಡಾ.ರಾಜಶೇಖರ ಬಳ್ಳಾರಿ

0
Continuous eye check up camp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಂತಾರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಗದಗ ಘಟಕವು ಈಗಾಗಲೇ ನಿರಂತರವಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತ ಬಂದಿದ್ದು, ಇದೀಗ ಪ್ರತಿನಿತ್ಯ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಡಾ.ರಾಜಶೇಖರ ಬಳ್ಳಾರಿ ಹೇಳಿದರು.

Advertisement

ಅವರು ಗದಗ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ರೋಟರಿ ಐಕೇರ್ ಸೆಚಿಟರ್‌ನಲ್ಲಿ ರೋಟರಿ ಸಂಸ್ಥೆ ಗದಗ-ಬೆಟಗೇರಿ ಹಾಗೂ ರೋಟರಿ ಕ್ಲಬ್ ವೆಲ್ಪೇರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಿಸಲಾದ ನಿರಂತರ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನಸಾಮಾನ್ಯರಿಗೂ ಈ ಸೌಲಭ್ಯ ಸಿಗಲೆಂಬ ಸದುದ್ದೇಶದಿಂದ 20 ರೂ.ಗಳ ಶುಲ್ಕವನ್ನು ಹೆಸರು ನೋಂದಣಿಗೆ ನಿಗದಿಗೊಳಿಸಿದ್ದು, ಕಣ್ಣಿನ ಪರೀಕ್ಷೆಯ ಬಳಿಕ ಆಪರೇಷನ್ ಅಗತ್ಯವಿದ್ದವರಿಗೆ ತಜ್ಞ ವೈದ್ಯರ ಸಲಹೆಯೊಂದಿಗೆ ರೋಟರಿ ಕ್ಲಬ್‌ನಿಂದ ರೋಟರಿ ಐಕೇರ್ ಸೆಚಿಟರ್‌ನಲ್ಲಿ ಪ್ರತಿ ತಿಂಗಳೂ ಕೈಗೊಳ್ಳುವ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವದು ಎಂದರು.

ಅಧ್ಯಕ್ಷತೆಯನ್ನು ಗದಗ-ಬೆಟಗೇರಿ ರೋಟರಿ ಸಂಸ್ಥೆಯ ಅಧ್ಯಕ್ಷ ಡಾ. ರೇವಣಸಿದ್ದೇಶ್ವರ ಉಪ್ಪಿನ ವಹಿಸಿದ್ದರು.

ಸಮಾರಂಭದಲ್ಲಿ ಕ್ಲಬ್ ಕಾರ್ಯದರ್ಶಿ ಸಂತೋಷ ಅಕ್ಕಿ, ರೋಟರಿ ಕ್ಲಬ್ ವೆಲ್ಪೇರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಸುಲ್ತಾನಪೂರ, ಕಾರ್ಯದರ್ಶಿ ಬಾಲಕೃಷ್ಣ ಕಾಮತ್, ಡಾ. ಎಸ್.ಡಿ. ಸಜ್ಜನರ, ಡಾ. ರಾಧಿಕಾ ಬಳ್ಳಾರಿ, ಎಚ್.ಎಸ್. ಪಾಟೀಲ, ಶಿವಾಚಾರ್ಯ ಹೊಸಳ್ಳಿಮಠ, ಅಕ್ಷಯ್ ಶೆಟ್ಟಿ, ಕಾರ್ತಿಕ್ ಮುತ್ತಿನಪೆಂಡಿಮಠ, ಅನಿಲಕುಮಾರ ಹಂದ್ರಾಳ, ಡಾ. ಪ್ರದೀಪ ಉಗಲಾಟ, ವಿಶ್ವನಾಥ ಯಳಮಲಿ, ಸಂಪನ್ಮೂಲ ವ್ಯಕ್ತಿ ರುದ್ರೇಶ್ ಬಳಿಗಾರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here