ಕೋಲಾರ:- ಜಿಲ್ಲೆಯ ವೇಮಗಲ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ಮೇಲೆ ನಿರಂತರವಾಗಿ 6 ಜನ ಕಾಮಿಗಳಿಂದ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
Advertisement
ಘಟನೆ ಸಂಬಂಧ ಬಾಲಕಿ ದೂರಿನ ಅನ್ವಯ ಮೂವರನ್ನು ಬಂಧಿಸಲಾಗಿದೆ. ರಾಹುಲ್, ನಾಗೇಶ್ ಹಾಗೂ ಪುನೀತ್ ಬಂಧಿತರು. ಘಟನೆ ಬಳಿಕ ತಲೆಮರೆಸಿಕೊಂಡಿರುವ ಇನ್ನುಳಿದ ಚೇತನ್, ಕಿರಣ್, ಮಹೇಂದ್ರಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ನೀಡಿದ ಹೇಳಿಕೆ ಆಧರಿಸಿ ಆರು ಜನರ ವಿರುದ್ದ ಜು.18 ರಂದು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ನಡೆದಿದೆ.