HomeGadag Newsರಾಷ್ಟ್ರಮಟ್ಟದ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಡಾ. ಎಚ್.ಕೆ. ಪಾಟೀಲ

ರಾಷ್ಟ್ರಮಟ್ಟದ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಸಚಿವ ಡಾ. ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ಸಹಕಾರ ಚಳುವಳಿಯು ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು, ರಾಷ್ಟçದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಶುಕ್ರವಾರ ಗದುಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಭಾರತೀಯ ಸಹಕಾರ ಅಧ್ಯಯನ ಸಂಸ್ಥೆ ಪುಣೆ, ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಮತ್ತು ವೈಕುಂಟ್ ಮೆಹ್ತಾ ರಾಷ್ಟಿçÃಯ ಸಹಕಾರ ನಿರ್ವಹಣೆ ಸಂಸ್ಥೆ-ಪುಣೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ `ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ’ ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟಿçÃಯ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಜಿಲ್ಲೆಯ ಕಣಗಿನಹಾಳದಲ್ಲಿ 1905ರಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ ಅವರು ಮೊದಲ ಕೃಷಿ ಸಾಲ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಸಹಕಾರದ ಬೀಜಗಳನ್ನು ಬಿತ್ತಿದರು. ನಂತರ ಜಿಲ್ಲೆಯ ಹಿರೇ ಹಂದಿಗೋಳ ಹಾಗೂ ಹುಲಕೋಟಿಯಲ್ಲಿ ಸಹಕಾರ ಸಂಘ ಸ್ಥಾಪನೆಗೊಂಡವು. 1904ರಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಗಳ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದ 2011ರ 97ನೇ ಸಾಂವಿಧಾನಿಕ ತಿದ್ದುಪಡಿಯವರೆಗೆ, ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆಯ ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ ಎಂದರು.

ಸಹಕಾರಿ ಹೃದಯ ಸ್ಥಿತಿಸ್ಥಾಪಕತ್ವ, ಹೊಂದಿಕೊಳ್ಳುವ ಮತ್ತು ಬಲವಾಗಿ ಹೊರ ಹೊಮ್ಮುವ ಸಾಮರ್ಥ್ಯ, ಭಾರತದ ಸಹಕಾರಿ ಚಳುವಳಿಯ ಮೂಲಾಧಾರವಾಗಿವೆ. ಭಾರತದ ಸಹಕಾರಿ ಕ್ಷೇತ್ರವು 8.50 ಕೋಟಿ ಸೊಸೈಟಿಗಳು ಮತ್ತು 29 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದಲ್ಲೇ ಅತಿ ದೊಡ್ಡ ಸಹಕಾರ ಕ್ಷೇತ್ರ ಹೊಂದಿರುವ ದೇಶವಾಗಿದೆ. ಈ ಸಂಸ್ಥೆಗಳು ಕೃಷಿ, ಸಂಬAಧಿತ ವಲಯಗಳು, ಬ್ಯಾಂಕಿAಗ್ ಮತ್ತು ಅದರಾಚೆಗಿನ ಬೆಳವಣಿಗೆಯ ಎಂಜಿನ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ರಚನೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿವೆ.

ಕ.ರಾ.ಗ್ರಾ. ಪಂ.ರಾ. ವಿ.ವಿ ರಜಿಸ್ಟಾçರ್ ಡಾ. ಸುರೇಶ ನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಗಾಗಿ ಸಹಕಾರ ವ್ಯವಹಾರ ಮಾದರಿ ಎಂಬ ವಿಷಯದ ಮೇಲೆ 39ನೇ ವಾರ್ಷಿಕ ರಾಷ್ಟಿçÃಯ ಸಂಶೋಧನಾ ಸಮ್ಮೇಳನ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಹಾಗೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣೀಭೂತರಾದ ಸಚಿವರಾದ ಎಚ್.ಕೆ. ಪಾಟೀಲ ಅವರು ಅಭಿನಂದನಾರ್ಹರು ಎಂದು ಪ್ರಶಂಸನಾಪೂರ್ವಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಪುಣೆಯ ಭಾರತೀಯ ಸಹಕಾರ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಜಿ.ಎಚ್. ಅಮಿನ್, ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಯಶವಂತ ಡೋಗ್ರೆ, ಪಿ.ಎಲ್.ಡಿ. ಬ್ಯಾಂಕ್‌ನ ಗುರಣ್ಣಾ ಬಳಗಾನೂರ, ಮರ್ಚಂಟ್ ಲಿಬರಲ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಮೋಹನ ಕೋಟಿ, ನಬಾರ್ಡ್ನ ಜಿ.ಜಗದೀಶ, ಕೆಎಸ್‌ಎಸ್‌ಎಫ್‌ಸಿಎಲ್ ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್, ಪುಣೆಯ ಇಂಡಿಯನ್ ಸೊಸೈಟಿ ಫಾರ್ ಸ್ಟಡೀಸ್ ಇನ್ ಕೋ ಆಪರೇಷನ್ ಕಾರ್ಯದರ್ಶಿ ಡಾ. ಅನಿಲ ಕರಂಜಿಕರ್, ಕೆ.ಎಸ್.ಎಸ್.ಎಫ್.ಸಿ.ಎಲ್. ಮ್ಯಾನೇಜಿಂಗ್ ಡೈರೆಕ್ಟರ್ ಶರಣಗೌಡ ಪಾಟೀಲ, ವಿಶ್ವವಿದ್ಯಾಲಯದ ಡಾ. ಅಬ್ದುಲ್ ಅಜಿಜ್ ಮುಲ್ಲಾ, ಡಾ. ಅಭಯಕುಮಾರ್ ಗಸ್ತಿ ಹಾಜರಿದ್ದರು.

 

**ಬಾಕ್ಸ್**

ಸ್ವಾತಂತ್ರö್ಯ ಪೂರ್ವ ಬೆಳವಣಿಗೆಯ ಪ್ರಮುಖ ಲಕ್ಷಣಗಳನ್ನು ವಿವರಿಸಿದ ಸಚಿವರು, ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲರಂತಹ ನಾಯಕರು ಸಹಕಾರಿಗಳನ್ನು ಸಮಗ್ರ ಅಭಿವೃದ್ಧಿಗೆ ಸಾಧನವಾಗಿ, ಕೈಗೆಟುಕುವ ಸಾಲ, ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಕೈಗಾರಿಕೆ, ಜವಳಿ, ಜಾನುವಾರುಗಳ ಆಹಾರ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಸಾಧನಗಳಾಗಿ ರೂಪಿಸಿದರು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

 

**ಕೋಟ್**

ಪ್ರಸಕ್ತ ವರ್ಷವನ್ನು ರಾಷ್ಟಿçÃಯ ಸಹಕಾರ ವರ್ಷವೆಂದು ಘೋಷಣೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಹಕಾರಿ ರಂಗ ಉದಯಿಸಿದ ಗದಗ ಜಿಲ್ಲೆಯಲ್ಲಿಯೇ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದ್ದು, ಗದಗ ಜಿಲ್ಲೆ ನಮ್ಮ ಹೆಮ್ಮೆ.

– ಎಚ್.ಕೆ. ಪಾಟೀಲ.

ಸಚಿವರು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!