ಕೋಲಾರ:- ತಾಲೂಕಿನ ಚುಂಚದೇನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಡೀಸೆಲ್ ಟ್ಯಾಂಕರ್ ಪಲ್ಟಿ ಹೊಡೆದ ಘಟನೆ ಜರುಗಿದೆ.
Advertisement
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಡೀಸೆಲ್ ಟ್ಯಾಂಕರ್ ರಸ್ತೆಯ ಪಕ್ಕದಲ್ಲಿ ಉರುಳಿ ಬಿದ್ದಿದ್ದು, ಕೆಲಕಾಲ ಅತಂಕ ಮನೆ ಮಾಡಿತ್ತು. ಡೀಸೆಲ್ ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೊತೆಗೆ ಡಿಸೇಲ್ ಸಹ ಇದ್ದ ಕಾರಣ ಆಗಬೇಕಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಮುನ್ನಚ್ಚರಿಕೆ ಕ್ರಮವಾಗಿ ಡೀಸೆಲ್ ಟ್ಯಾಂಕರ್‌ಗೆ ನೀರು ಹಾಗೂ ಲಿಕ್ವಿಡ್ ಹರಿಸಿದರು. ಹಾಗಾಗಿ ಪರಿಣಿತರು ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ತೆರವುಗೊಳಿಸಲಾಯಿತು.
ಒಟ್ಟಾರೆ ಕೊಂಚ ಯಾಮಾರಿದ್ರೂ ದುರಂತವೇ ಸಂಭವಿಸುತಿತ್ತು. ಅದೃಷ್ಟವಶಾತ್ ತಪ್ಪಿದೆ.