ಮೋದಿ ಆಡಳಿತದಲ್ಲಿ ಭಯೋತ್ಪಾದನೆಯ ನಿಯಂತ್ರಣ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ದೇಶದ ಬೆಂಗಳೂರು, ಹೈದರಾಬಾದ್, ವಾರಣಾಸಿ, ಅಸ್ಸಾಂ, ದಿಲ್ಲಿ, ಪುಣೆ, ಮುಂಬೈ ಸೇರಿದಂತೆ ಹಲವಾರು ಕಡೆ ಭಯೋತ್ಪಾದಕ ಕೃತ್ಯಗಳು ಈ ಹಿಂದೆ ನಿರಂತರವಾಗಿ ನಡೆಯುತ್ತಿದ್ದವು. ಘಟನೆ ನಡೆದಾಗ ಮೇಣದಬತ್ತಿ ಹಚ್ಚಿ ಸಂತಾಪ ಸೂಚಿಸಲಾಗುತ್ತಿತ್ತು. ಮತ್ತೆ ಮರುದಿನ ಭಯೋತ್ಪಾದನೆ ಮುಂದುವರೆಯುತ್ತಿತ್ತು. ಆದರೆ, ಮೋದಿ ಆಡಳಿತದಲ್ಲಿ ಭಯೋತ್ಪಾದಕರನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Advertisement

ಅವರು ನರಗುಂದದಲ್ಲಿ ನಡೆದ ಹರ್ ಘರ್ ತಿರಂಗಾ ಯಾತ್ರೆ ಕಾರ್ಯಕ್ರಮದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಹರ್ ಘರ್ ತಿರಂಗಾ ಯಾತ್ರೆಯನ್ನು ಸ್ವಾತಂತ್ರ್ಯದ 75ನೇ ವರ್ಷದಿಂದ ಆರಂಭಿಸಲಾಯಿತು. ಸುಮಾರು 10 ಕೋಟಿಗೂ ಅಧಿಕ ಮನೆಗಳ ಮೇಲೆ ಭಾರತದ ತ್ರಿವರ್ಣ ದ್ವಜ ಹಾರಾಡಿತು. ಹೈದರಾಬಾದ್‌ನ ಪಿಂಗ್ಳೆ ಎನ್ನುವರು ಭಾರತದ ದ್ವಜವನ್ನು ತಯಾರಿಸಿದರು. ಹಲವು ವಿರೋಧದ ನಡುವೆಯೂ ಸ್ವಾತಂತ್ರ್ಯಾನಂತರ ಈ ಧ್ವಜವನ್ನು ಭಾರತೀಯರು ಒಪ್ಪಿಕೊಂಡರು ಎಂದು ಇತಿಹಾಸ ನೆನಪಿಸಿಕೊಂಡರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನರೇಂದ್ರ ಮೋದಿ ರೈತರ ಹಿತಾಸಕ್ತಿ ಕಾಯುವ ಭಾರತಾಂಭೆಯ ಹೆಮ್ಮೆಯ ಪುತ್ರ. ಅಮೇರಿಕ ಭಾರತದ ರೈತರು ಬೆಳೆದ ಬೆಳೆಗಳಿಗೆ ಶೇ. 50 ಸುಂಕ ವಿಧಿಸಿತ್ತು. ಆದರೆ, ಅದ್ಯಾವುದಕ್ಕೂ ಬಗ್ಗದ ಮೋದಿ ರೈತರ ಹಿತ ಕಾಪಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಸುರಕ್ಷತೆ ಇರಲಿಲ್ಲ. ನರೇಂದ್ರ ಮೋದಿ ಭಾರತದಲ್ಲಿರುವ ಭಯೋತ್ಪಾದಕರಿಗೆ ಭಯ ಹುಟ್ಚಿಸುವ ಕೆಲಸ ಮಾಡಿದ್ದಾರೆ ಎಂದರು.

ಸ್ವಾತಂತ್ರ್ಯದ ನಂತರ ಬಡತನ ನಮ್ಮ ವೈರಿ ಆಯಿತು. ಮೋದಿ ಬಂದ ನಂತರ ಬಡತನ ನಿವಾರಣೆ ಆಗುತ್ತಿದೆ. ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಕಾರ್ಯ ಆಗಿದೆ. ನಿರೂದ್ಯೋಗ ಹತೋಟಿಗೆ ಬಂದಿದೆ. ರೈತರ ಉತ್ಪಾದನೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಭಾರತದ ಅಭಿವೃದ್ಧಿ ಪ್ರತಿ ವರ್ಷ ಶೇ. 6.5 ಹೆಚ್ಚಾಗುತ್ತಿದೆ. ದೇಶಕ್ಕಾಗಿ ಬದುಕಬೇಕು, ದೇಶ ಸೇವೆ ಮಾಡಬೇಕು, ದೇಶವನ್ನು ಪ್ರೀತಿಸಬೇಕು. ತ್ರಿವರ್ಣ ದ್ವಜವನ್ನು ಎತ್ತರಕ್ಕೆ ಹಾರಿಸಿ ದೇಶಭಕ್ತಿ ಮೆರೆಯಬೇಕು ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮಾಜಿ ಶಾಸಕ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾವಣ್ಣನವರ, ಡಾ. ಚಂದ್ರು ಲಮಾಣಿ, ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಹೇಂದ್ರ ಕೌತಾಳ, ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಭರತ್ ಬೊಮ್ಮಾಯಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಬಿಜೆಪಿಯ ವಿವಿಧ ಮಂಡಳದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೋದಿ ಆಡಳಿತದಲ್ಲಿ ತ್ರಿವರ್ಣ ಧ್ವಜಕ್ಕೆ ಮತ್ತಷ್ಟು ರಂಗು ಬಂದಿದ್ದು, ಜಗತ್ತಿನಾದ್ಯಂತ ನಮ್ಮ ತ್ರಿವರ್ಣ ಧ್ವಜಕ್ಕೆ ವಿಶೇಷ ಸ್ಥಾನಮಾನವೂ ಸಿಗುತ್ತಿದೆ. ಬೇರೆ ದೇಶದಲ್ಲಿ ನಡೆದ ಯುದ್ಧದ ಸಮಯದಲ್ಲಿ ನಮ್ಮ ರಾಷ್ಟç ಧ್ವಜ ಹಿಡಿದು ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ನಮ್ಮ ಧ್ವಜದ ತಾಕತ್ತು.

– ಸಿ.ಸಿ. ಪಾಟೀಲ.

ಶಾಸಕರು, ನರಗುಂದ.


Spread the love

LEAVE A REPLY

Please enter your comment!
Please enter your name here