HomeGadag Newsಅಬ್ಬರದ ಸೌಂಡ್ ಸಿಸ್ಟಮ್ ನಿಯಂತ್ರಿಸಿ

ಅಬ್ಬರದ ಸೌಂಡ್ ಸಿಸ್ಟಮ್ ನಿಯಂತ್ರಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಗಳಲ್ಲಿ ಸೌಂಡ್ ಸಿಸ್ಟಮ್/ಧ್ವನಿ ವರ್ಧಕದ ಬಳಕೆ ಮೀತಿಮೀರಿದ್ದು, ಇದು ಸಾರ್ವಜನಿಕರ ನಿದ್ದೆ, ನೆಮ್ಮದಿ ಕೆಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರವಷ್ಟೇ ಅಬ್ಬರದ ಧ್ವನಿವರ್ಧಕದ ಬಳಕೆ ಮೇಲೆ ನಿರ್ಬಂಧ, ನಿಗಾವಹಿಸುವಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.

ಟ್ರ್ಯಾಕ್ಟರ್‌ ನಲ್ಲಿ ಅಬ್ಬರದ ಡಿಜೆ ಸೌಂಡ್ ಸಿಸ್ಟಂ ಅಳವಡಿಸುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ಯಾಶನ್/ಪ್ರತಿಷ್ಠೆಯಾಗಿದೆ. ವಿವಿಧ ಬಗೆಯ ಸೌಂಡ್ ಸಿಸ್ಟಂ ಅಳವಡಿಕೆಯಿಂದ ಟ್ರ್ಯಾಕ್ಟರ್‌ ಅಲಂಕೃತಗೊಂಡಿರುತ್ತದೆ. ರಸ್ತೆಯುದ್ದಕ್ಕೂ ಜೋರಾದ ಸೌಂಡ್‌ನಲ್ಲಿ ಅಶ್ಲೀಲ ಸಾಹಿತ್ಯದ ಹಾಡು, ಡಿಜೆ ಮಿಕ್ಸಿಂಗ್ ಹಾಡು ಹಾಕಿ ವಾಹನ ಓಡಿಸುತ್ತಾರೆ. ಸಮಯ, ಸಂದರ್ಭ, ಪರಿಸ್ಥಿತಿ, ನಾವೆಲ್ಲಿದ್ದೇವೆ ಎಂಬ ಅರಿವೂ ಇಲ್ಲದಂತೆ ವರ್ತಿಸಲಾಗುತ್ತಿದೆ. ಇದರಿಂದ ಹಿಂದೆ ಬರುವ ಬಸ್ಸು, ಲಾರಿ ಇತರೆಲ್ಲ ವಾಹನಗಳು, ಬೈಕ್ ಸವಾರರು ಯಾರೂ ದಾರಿ ಬಿಡುವುದಿಲ್ಲ. ಹೇಳಿದವರೊಂದಿಗೆ ಜಗಳ ಮಾಡುತ್ತಾರೆ.

ರಸ್ತೆಯ ಅಕ್ಕಪಕ್ಕದ ನಿವಾಸಿಗಳಿಗೆ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆ, ದೇವಸ್ಥಾನಗಳ ಬಳಿ ಶಬ್ದ ಮಾಲಿನ್ಯ, ಅಶಾಂತಿಯ ವಾತಾವರಣ ನಿರ್ಮಾಣ ಆಗುತ್ತಿದೆ. ಆದ್ದರಿಂದ ಸಾರ್ವಜನಿಕವಾಗಿ ಜೋರಾಗಿ ಧ್ವನಿವರ್ಧಕಗಳನ್ನು ಬಳಕೆ ಮಾಡಿಕೊಂಡ ಟ್ರ‍್ಯಾಕ್ಟರ್‌ಗಳನ್ನು ಹಿಡಿದು ದಂಡ ವಿಧಿಸಬೇಕು. ಅಂತಹ ಸೌಂಡ್ ಬಾಕ್ಸ್ಗಳನ್ನು ವಶಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಾದ ಶಂಕರ ಬ್ಯಾಡಗಿ, ಮಹಾದೇವಪ್ಪ ಕುಂದಗೋಳ, ಸಿದ್ದು ಕನವಳ್ಳಿ, ವೀರನಗೌಡ ಪಾಟೀಲ ಮುಂತಾದವರು ಆಗ್ರಹಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!