ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್: ಬಾಗಲಕೋಟೆಯ ಮುಸ್ಲಿಂ ಯುವಕ ಅರೆಸ್ಟ್!

0
Spread the love

ಬಾಗಲಕೋಟೆ:- ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಹಿನ್ನೆಲೆ ಬಾಗಲಕೋಟೆಯ ಮುಸ್ಲಿಂ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 27 ವರ್ಷದ ಮೊಹಮ್ಮದ್ ಅಜೀಜ್ ರೋಣ ಬಂಧಿತ ಯುವಕ.

Advertisement

ಈತ ಮೋದಿ ಫೋಟೋ ಎಡಿಟ್​ ಮಾಡಿ ಅವಹೇಳನಕಾರಿ ಪೋಸ್ಟ್​ ಹಾಕಿದ್ದ. ಮೊಹಮ್ಮದ್ ಕೇಸರಿ ಬಟ್ಟೆ ಧರಿಸಿದ​ ಪ್ರಧಾನಮಂತ್ರಿ ಮೋದಿ ಅವರನ್ನು ಕೈದಿಯಂತೆ ಜೈಲಿನಲ್ಲಿ ಬಂಧಿಸಿದ ರೀತಿ ಎಡಿಟ್ ಮಾಡಿದ್ದ. ಮೋದಿಯವರ ಮುಂದೆ ಒವೈಸಿ ಪೊಲೀಸ್ ಅಧಿಕಾರಿಯ ವೇಷದಲ್ಲಿ‌ ಕೂತಿರುವ ರೀತಿ ಎಡಿಟ್ ಮಾಡಿದ್ದ. ಈ ಫೋಟೋ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

ಈ ಫೋಟೋ ವೈರಲ್ ಆಗುತ್ತಿದ್ದಂತೆ ಮೊಹಮ್ಮದ್​ ಅಜಿಜ್ ಅಬ್ದುಲ್ ಸಾಬ್ ರೋಣ ವಿರುದ್ಧ ಸುಮೋಟೋ ಕೇಸ್ ಹಾಕಿ ಆರೋಪಿಯನ್ನು ಕಲಾದಗಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪೊಲೀಸರು ಆರೋಪಿಯ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here