ಮಂಗಳೂರು: ಮಂಗಳೂರಿನ ಉಳ್ಳಾಲ ಸಜೀಪನಡು ಎಂಬಲ್ಲಿ ಮಸೀದಿ ವಿಚಾರಕ್ಕೆ ಗಲಾಟೆ ನಡೆದು ಎರಡು ತಂಡಗಳ ಸದಸ್ಯರು ಬಡಿದಾಡಿಕೊಂಡ ಘಟನೆ ಜರುಗಿದೆ.
ಸಜಿಪ ಪಡು ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಈ ಮಾರಾಮಾರಿ ನಡೆದಿದೆ. ಕತ್ತಿ, ದೊಣ್ಣೆ, ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಮಸೀದಿ ಬಳಿ ಹಲ್ಲೆ ನಡೆದ ಬಳಿಕ ಓರ್ವನ ಮನೆಗೆ ಬಂದು ಅಲ್ಲಿದ್ದ ಮಹಿಳೆಯರು ಮಕ್ಕಳ ಮುಂದೆ ಹಲ್ಲೆ ನಡೆಸಲಾಗಿದೆ. ಮಸೀದಿ ಅಧ್ಯಕ್ಷನೂ ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.
ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ಆರ್ಮ್ಸ್ ಆಕ್ಟ್ ಅಡಿ ದಾಖಲಾಗಿದೆ.
ಪೋಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.



