ಉತ್ತಮ ಉದ್ಯೋಗದ ಗುರಿ ಹೊಂದಿ : ಸಂಕಪ್ಪರವರ

0
Convocation ceremony of Sri Jagadguru Renukacharya Industrial Training Institute
Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಇಂದಿನ ಯುವಕರು ಉತ್ತಮವಾದ ತರಬೇತಿ ಪಡೆದು, ಉತ್ತಮವಾದ ಉದ್ಯೋಗವನ್ನು ಪಡೆಯುವ ಗುರಿಯನ್ನು ಹೊಂದಬೇಕೆಂದು ಶ್ರೀ ರಂಭಾಪುರಿ ಪೀಠದ ಲೆಕ್ಕಾಧಿಕಾರಿ ಸಂಕಪ್ಪರವರ ತಿಳಿಸಿದರು.

Advertisement

ಅವರು ಬಾಳೆಹೊನ್ನೂರಿನ ರೇಣುಕ ನಗರದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಸ್ವಾತಂತ್ರ‍್ಯ ಹೋರಾಟಗಾರರಾದ ಸುಭಾಷ್ ಚಂದ್ರಬೋಸ್ ಹಾಗೂ ಭಗತ್‌ಸಿಂಗ್‌ರವರ ಬಲಿಷ್ಠ ಭಾರತದ ಕನಸು ನನಸಾಗಬೇಕಾದರೆ ಯುವ ಜನಾಂಗ ದೇಶಭಕ್ತಿಯನ್ನು ಬೆಳೆಸಿಕೊಂಡು ಉದ್ಯೋಗಸ್ಥರಾಗಬೇಕು ಎಂದರು.

ಬಾಳೆಹೊನ್ನೂರು ವರ್ತಕರ ಸಂಘದ ಅಧ್ಯಕ್ಷ ಮನುಕುಮಾರ್ ಕಲ್ಲೇಶ್ವರ ಮಾತನಾಡಿ, ಐಟಿಐ ತರಬೇತಿ ಪಡೆದ ಯುವಕ ಮತ್ತು ಯುವತಿಯರಿಗೆ ಬಹಳ ಉದ್ಯೋಗಾವಕಾಶಗಳಿವೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಕರು ತುಂಬಾ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿ ಬಾಳೆಹೊನ್ನೂರಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಆಗಸ್ಟ್ 2024 ರಲ್ಲಿ ಜರುಗಿದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ತರಬೇತಿದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯ ಆನಂದ ಹೆಚ್.ಆರ್ ಮಾತನಾಡಿ, ನಮ್ಮ ಸಂಸ್ಥೆಗೆ ಪ್ರಸ್ತುತ ಸಾಲಿನಲ್ಲಿ ಶೇ.88 ರಷ್ಟು ಫಲಿತಾಂಶ ಬಂದಿದ್ದು, ಎಲೆಕ್ಟ್ರಿಶಿಯನ್ ವಿಭಾಗದ ವಿದ್ಯಾರ್ಥಿ ಲಕ್ಷ್ಮೀಶ ವಿ.ಭಟ್ ಶೇ. 90ರಷ್ಟು ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.

ಮುಖ್ಯ ಅತಿಥಿಗಳು ತರಬೇತಿದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರಗಳನ್ನು ವಿತರಿಸಿದರು. ಪ್ರತಿಭಾವಂತ ತರಬೇತಿದಾರ ಲಕ್ಷ್ಮೀಶ ವಿ.ಭಟ್. ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಅಶೋಕ್ ಸ್ವಾಗತಿಸಿದರೆ, ತರಬೇತಿದಾರ ಪ್ರತೀಕ್ ಕಿಣಿ ಪ್ರಾರ್ಥಿಸಿದರು. ಶಿಕ್ಷಕ ಚಂದ್ರಶೇಖರ್ ನಿರೂಪಿಸಿ ವಂದಿಸಿದರು. ಸಿಬ್ಬಂದಿಗಳಾದ ಶ್ರೀನಿವಾಸ್, ರವಿರಾಜು, ಮಲ್ಲಿಕಾರ್ಜುನ, ಉಮೇಶ್, ಪ್ರಕಾಶ್ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here