ಬೆಂಗಳೂರು:- ಮನೆಯಲ್ಲಿ ಕುಕ್ಕರ್ ಸ್ಫೋಟಗೊಂಡು ಇಬ್ಬರು ಯುವಕರ ಪೈಕಿ ಓರ್ವ ಸಾವನ್ನಪ್ಪಿರುವಂತಹ ಘಟನೆ ರಾಜಧಾನಿ ಬೆಂಗಳೂರಿನ ಪುಟ್ಟೇನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರದಲ್ಲಿ ಜರುಗಿದೆ.
ಮೋಸಿನ್ ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಮೀರ್ಗೆ ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಯುವಕರು ಯುಪಿ ಮೂಲದವರು ಎಂದು ತಿಳಿದು ಬಂದಿದೆ. ಈ ಸ್ಫೋಟ ಕೂಡ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮಾದರಿಯಲ್ಲೇ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಲಾಗಿದೆ.
ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಇಬ್ಬರು ಯುವಕರು ಮಲಗಿದ್ದಾರೆ. ಈ ವೇಳೆ ಕುಕ್ಕರ್ ಹೀಟ್ ಹೆಚ್ಚಾಗಿ ಸ್ಫೋಟಗೊಂಡಿದೆ. ಕುಕ್ಕರ್ ಸ್ಫೋಟವಾಗಿ ಬಲ್ಬ್ಗೆ ತಾಗಿ ಶಾರ್ಟ್ ಸರ್ಕೀಟ್ನಿಂದ ರೂಂಗೆ ಬೆಂಕಿ ಹೊತ್ತಿಕೊಂಡಿದೆ.
ಅಡಿಗೆ ಮಾಡಲು ಇಟ್ಟಾಗ ಕುಕ್ಕರ್ ಸಿಡಿದಿದೆ. ಬೇರೆ ಯಾವ ಕಾರಣಕ್ಕೆ ಸ್ಫೋಟಗೊಂಡಿರುವ ಮಾಹಿತಿ ಇಲ್ಲ. ಈಗಾಗಲೇ ಎಲ್ಲಾ ರೀತಿಯಿಂದಲ್ಲೂ ಪರಿಶೀಲನೆ ನಡೆಸಲಾಗಿದೆ. ಉಗ್ರ ಕೃತ್ಯದ ರೀತಿಯಲ್ಲಿ ಯಾವ ಸಾಕ್ಷಿಗಳು ಪತ್ತೆ ಆಗಿಲ್ಲ. ಈಗಾಗಲೇ ನುರಿತ ತಜ್ಞರಿಂದ ಪರಿಶೀಲನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.