ಗದಗ ಜಿಲ್ಲೆಗೆ ಕೊರೋನಾ ಆತಂಕ: ಹೆಮ್ಮಾರಿ ಎದುರಿಸಲು ಸಜ್ಜಾದ ಜಿಮ್ಸ್.. ವಿಶೇಷ ಐಸೋಲೇಷನ್ ವಾರ್ಡ್ ಆರಂಭ!

0
Spread the love

ಗದಗ:- ಕರ್ನಾಟಕ ಸೇರಿ ದೇಶದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಮನೆ ಮಾಡಿದೆ. ಅದರಲ್ಲೂ ಕರ್ನಾಟಕದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ದಿನಕ್ಕೊಂದು ಕೇಸ್ ವರದಿ ಆಗುತ್ತಲೇ ಇದ್ದು, ಜನತೆಯನ್ನು ಆತಂಕಕ್ಕೆ ದೂಡಿದೆ.

Advertisement

ಅದರಂತೆ ಗದಗ ಜಿಲ್ಲೆಯಲ್ಲೂ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಕೋವಿಡ್ ಐಸೋಲೇಷನ್ ವಾರ್ಡ್ ಆರಂಭಿಸಲಾಗಿದೆ. ಈ ಮೂಲಕ ಹೆಮ್ಮಾರಿ ಎದುರಿಸಲು ಜಿಮ್ಸ್ ಆಡಳಿತ ಮಂಡಳಿ ಸಜ್ಜಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕೊರೋನಾ ವಾರ್ಡ್ ತೆರೆಯಲಾಗಿದ್ದು, ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆಯುಳ್ಳ 10 ಬೆಡ್ ಗಳ ವಾರ್ಡ್ ತೆರೆಯಲಾಗಿದೆ. ಕೊರೋನಾ ಚಿಕಿತ್ಸೆಗೆ ಬೇಕಾಗುವ ಎಲ್ಲಾ ರೀತಿಯ ಔಷಧಿಗಳ ವ್ಯವಸ್ಥೆ ಮಾಡಲಾಗಿದೆ. ವಯಸ್ಸಾದ, ಗರ್ಭಿಣಿಯರು, ಮಕ್ಕಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ಸೋಂಕು ಉಲ್ಬಣಿಸಿದ್ರೆ ಪ್ರತ್ಯೇಕ ವಾರ್ಡ್‌ನಲ್ಲಿಯೇ ಚಿಕಿತ್ಸೆ ನೀಡಲು ಜಿಮ್ಸ್ ಸಜ್ಜಾಗಿದೆ.

ಸಧ್ಯ ಕೊರೋನಾ ಗುಣಲಕ್ಷಣ ಹೊಂದಿದವರನ್ನ ಮಾತ್ರ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಟೆಸ್ಟಿಂಗ್ ನಲ್ಲಿ ಪಾಸಿಟಿವ್ ಬಂದ್ರೆ ಕೊರೋನಾ ವಾರ್ಡ್ ‌ನಲ್ಲಿ ಚಿಕಿತ್ಸೆ‌ ನೀಡಲಾಗುತ್ತದೆ. ಗದಗ ಜಿಮ್ಸ್ ನಲ್ಲಿ ಆಕ್ಸಿಜನ್ ಸೌಲಭ್ಯಯುಳ್ಳ 750 ಬೆಡ್ ಗಳ ವ್ಯವಸ್ಥೆ ಇದೆ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ. ಜಿ ಎಂ ಪಲ್ಲೇದ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here