ಬೆಂಗಳೂರು:- ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂತಾ ಹೆಮ್ಮಾರಿ ಕೋವಿಡ್ ಮತ್ತೆ ಕರ್ನಾಟಕಕ್ಕೆ ಒಕ್ಕರಿಸಿದೆ. ಇಡೀ ಜಗತ್ತನ್ನೇ ಬಿಟ್ಟೂ ಬಿಡದೆ ಕಾದಿದ್ದ ಮಹಾಮಾರಿ ಕೊರೋನಾ ಮತ್ತೆ ತನ್ನ ಆರ್ಭಟ ಮುಂದುವರೆಸುವ ಮುನ್ಸೂಚನೆ ನೀಡಿದೆ.
Advertisement
ಇದೀಗ ಗಾಂಧಿನಗರದ 46 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಧೃಡವಾಗಿದ್ದು, ರಾಜಧಾನಿ ಬೆಂಗಳೂರು ಮಂದಿ ಆತಂಕಕ್ಕೊಳಗಾಗಿದ್ದಾರೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೋವಿಡ್ ಕಾಣಿಸಿಕೊಂಡಿದ್ದು, ಹೇಗೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ. ಸದ್ಯ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇದೀಗ ಕೊರೋನಾ ಟೆಸ್ಟಿಂಗ್ ಆರಂಭಿಸಲಾಗಿದ್ದು, ದಿನಕಳೆದಂತೆ ಪಾಸಿಟಿವ್ ದರ ಜಾಸ್ತಿಯಾಗುತ್ತಲಿದೆ. ಸೋಮವಾರ 191 ಜನರಿಗೆ ಟೆಸ್ಟ್ ಮಾಡಲಾಗಿದ್ದು, 37 ಜನರಿಗೆ ಪಾಸಿಟಿವ್ ಆಗಿದೆ. ಜೊತೆಗೆ 171 ಜನರಿಗೆ RT-PCR ಟೆಸ್ಟ್ ಮಾಡಲಾಗಿದೆ.