ವಿಜಯಸಾಕ್ಷಿ ಸುದ್ದಿ, ಲಕ್ಷೇಮೇಶ್ವರ: ಪಟ್ಟಣದ ಬಿಸಿಎನ್ ಕಾಟನ್ ಇಂಡಸ್ಟ್ರೀಸ್‌ನಲ್ಲಿ ನವೆಂಬರ್ 7ರಂದು ಬೆಳಿಗ್ಗೆ 9ಕ್ಕೆ ಸಿಸಿಐ (ಭಾರತೀಯ) ಹತ್ತಿ ನಿಗಮದಿಂದ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಕೇಂದ್ರ ಆರಂಭವಾಗಲಿದೆ. ಗ್ರೇಡ್ ಆಧಾರದ ಮೇಲೆ ಹತ್ತಿಗೆ 7,110ರಿಂದ 8,110 ರೂ ದರ ನಿಗದಿ ಪಡಿಸಲಾಗಿದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹತ್ತಿ ಮಾರಾಟ ಮಾಡಬೇಕು ಎಂದು ಸಿಸಿಐನ ಖರೀದಿ ವ್ಯವಸ್ಥಾಪಕ ಜಿ. ರಮೇಶ ತಿಳಿಸಿದ್ದಾರೆ.
ಲಕ್ಷೇಮೇಶ್ವರದಲ್ಲಿ ಬೆಂಬಲ ಬೆಲೆ ಹತ್ತಿ ಖರೀದಿ ಆರಂಭವಾಗಿರುವುದು ಹತ್ತಿ ಬೆಳೆಗಾರರಲ್ಲಿ ಸಂತಸ ತಂದಿದೆ. ಕಷ್ಟಪಟ್ಟು ಹತ್ತಿ ಬೆಳೆದ ರೈತರಿಗೆ ಇದರಿಂದಾಗಿ ಅನುಕೂಲ ಆಗಲಿದೆ. ರೈತ ಬಾಂಧವರು ಬೆಂಬಲ ಬೆಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಸಿಸಿ ಬ್ಯಾಂಕಿನ ನಿರ್ದೇಶಕ ಜಿ.ವಿ. ಪಾಟೀಲ ತಿಳಿಸಿದ್ದಾರೆ.



