ಗದಗ: ಗದಗಿನ ಕ್ರೀಡಾ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಗದಗ ಪ್ರೀಮಿಯರ್ ಲೀಗ್ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಗದಗ ಟೈಟಾನ್ಸ್ ತಂಡದ ಪರವಾಗಿ ಯುವ ನಾಯಕ ಕೃಷ್ಣಗೌಡ ಪಾಟೀಲರು ಮೈದಾನಕ್ಕಿಳಿಯಲಿದ್ದಾರೆ. ತಮ್ಮ ರಾಜಕೀಯ ವ್ಯಕ್ತಿತ್ವದಿಂದ ಅಷ್ಟೇ ಅಲ್ಲದೆ ಕ್ರೀಡೆಯಿಂದಲೂ ಕೂಡ ಅಭಿಮಾನಿಗಳನ್ನು ಗಳಿಸಿರುವುದು ಯುವಕರಿಗೆ ಸ್ಫೂರ್ತಿ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದು ಗದಗ-ಬೆಟಗೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರ್ ನದಾಫ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Trending Now



