ಹೊಸವರ್ಷಕ್ಕೆ ಕೌಂಟ್ ಡೌನ್: ನೂತನ ವರ್ಷ ಬರಮಾಡಿಕೊಳ್ಳಲು ಸಜ್ಜಾದ ಸಿಟಿ ಮಂದಿ!

0
Spread the love

ಬೆಂಗಳೂರು:- ಹೊಸ ವರುಷ, ಹೊಸ ಹರುಷ.. ಹೊಸ ಕನಸು ಕಳೆಗಟ್ಟೋಕೆ ಕೌಂಟ್​ ಡೌನ್​ ಶುರುವಾಗಿದೆ. 2024ಕ್ಕೆ ಬಾಯ್​ ಹೇಳಿ 2025ಕ್ಕೆ ಹಾಯ್​ ಹೇಳೋ ಸಮಯ ಸನ್ನಿಹಿತವಾಗ್ತಿದೆ.

Advertisement

ಅದರಂತೆ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿಯೂ ಸಜ್ಜಾಗಿದೆ. 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಸಿಲಿಕಾನ್ ಸಿಟಿ ಮಂದಿ ಕಾತುರರಾಗಿದ್ದಾರೆ.

ಈಗಾಗಲೇ ಬೆಂಗಳೂರು ಸಂಭ್ರಮಾಚರಣೆಯ ಮೂಡ್‌ನಲ್ಲಿದೆ.. ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌, ಕೋರಮಂಗಲ, ಇಂದಿರಾ ನಗರ ಕಲರ್‌ಫುಲ್ ಆಗಿವೆ.. ಝಗಮಗ ಎನ್ನುತ್ತಿವೆ.. ಸಹಸ್ರ ಸಹಸ್ರ ಮಂದಿ ಕುಣಿದು ಕುಪ್ಪಳಿಸಲು.. ಗೆಳೆಯ ಗೆಳೆತಿಯರ ಜೊತೆ ಸಂಭ್ರಮಿಸಲು ಸೆಲೆಬ್ರೆಷನ್ ಸ್ಟಾಟ್‌ಗಳಿಗೆ ಬರ್ತಿದ್ದಾರೆ.

ರಾತ್ರಿ 12 ಗಂಟೆ ಹೊತ್ತಿಗೆ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರಿಗಾಗಿ 40 ಸೇಫ್ಟಿ ಐಲ್ಯಾಂಡ್, ವಾಚ್ ಟವರ್ ನಿರ್ಮಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.


Spread the love

LEAVE A REPLY

Please enter your comment!
Please enter your name here