ಹೊಸ ವರ್ಷಾಚರಣೆಗೆ ದಿನಗಣನೆ: ಬಿಬಿಎಂಪಿ-ಪೊಲೀಸ್ ಇಲಾಖೆಯಿಂದ ಬಂತು‌ ರೂಲ್ಸ್!

0
Spread the love

ಬೆಂಗಳೂರು : ಹೊಸ ವರ್ಷ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದ್ದು, ನೂತನ ಸಂವತ್ಸರ ಸ್ವಾಗತಿಸಲು ರಾಜ್ಯ ರಾಜಧಾನಿ ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

Advertisement

ಪೊಲೀಸ್ ಇಲಾಖೆ ಜೊತೆ ಸಭೆ ನಡೆಸಿರೋ ಪಾಲಿಕೆ ಈ ಬಾರಿಯೂ ನ್ಯೂ ಇಯರ್‌ಗೆ ಕೆಲ ರೂಲ್ಸ್ ಜಾರಿ ತರಲು ಸಜ್ಜಾಗಿದೆ. ಪೊಲೀಸ್ ಇಲಾಖೆಯ ಗೈಡ್‌ಲೈನ್ಸ್‌ ಪ್ರಕಾರ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದೆ.

ನ್ಯೂಇಯರ್ ಸೆಲೆಬ್ರೇಷನ್‌ಗೆ  ನಿಯಮಗಳು

  • ರಾತ್ರಿ 1 ಗಂಟೆಯೊಳಗೆ ಸೆಲೆಬ್ರೇಷನ್‌ ಮುಗಿಯಬೇಕು
  • ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈಓವರ್ ಬಂದ್
  • MG ರಸ್ತೆ, ಬ್ರಿಗೇಡ್ ರಸ್ತೆ ಯಲ್ಲಿ ವಾಹನ ಸಂಚಾರ ಬಂದ್
  • ರಾತ್ರಿ 8 ಗಂಟೆಯ ಬಳಿಕ ವಾಹನಗಳ ಸಂಚಾರ ಬಂದ್
  • ಬ್ರಿಗೇಡ್ ರಸ್ತೆ ಸೇರಿ 800ಕ್ಕೂ ಹೆಚ್ಚು CCTV ಅಳವಡಿಕೆ
  • ಮಹಿಳೆಯರ ಸುರಕ್ಷತೆಗೆ ಮಹಿಳಾ ಸಿಬ್ಬಂದಿ ನಿಯೋಜನೆ
  • ಬಾರ್, ಪಬ್‌‌ಗಳಿಗೂ ರಾತ್ರಿ 1 ಗಂಟೆವರೆಗೆ ಅವಕಾಶ
  • ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ
  • ಲೌಡ್ ಸ್ಪೀಕರ್ ಹಾಗೂ ಪಟಾಕಿ ಸಿಡಿಸಲು ನಿರ್ಬಂಧ

ಒಟ್ಟಿನಲ್ಲಿ ಪೊಲೀಸ್ ಇಲಾಖೆಯ ಗೈಡ್‌ಲೈನ್ಸ್‌ ಪ್ರಕಾರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಯಾಗಲಿದೆ.


Spread the love

LEAVE A REPLY

Please enter your comment!
Please enter your name here