RCB ಪಂದ್ಯಕ್ಕೆ ಕ್ಷಣಗಣನೆ: ಅಣ್ಣಾವ್ರಂತೆ ಕೈ ಮುಗಿದು ಅಭಿಮಾನಿಗಳನ್ನು ನೆನೆದ ಕ್ಯಾಪ್ಟನ್ ಪಾಟಿದಾರ್!

0
Spread the love

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ IPL ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅದರಂತೆ ಇಂದು ಕೋಲ್ಕತ್ತಾದಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ.

Advertisement

ಇನ್ನೂ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್‌ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್‌ ಅವರ ಖ್ಯಾತ ಡೈಲಾಗ್​ ಹೊಡೆದಿದ್ದಾರೆ.

ಎಸ್, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ರಜತ್​ ಪಾಟಿದಾರ್​ ವರನಟ ಡಾಕ್ಟರ್​​ ರಾಜ್​ಕುಮಾರ್​ರನ್ನ ನೆನೆದಿದ್ದಾರೆ. ಫ್ಯಾನ್ಸ್​ ಬೆಂಬಲಕ್ಕೆ ಧನ್ಯವಾದ ಹೇಳಿರೋ ರಜತ್​, ಡಾಕ್ಟರ್​​ ರಾಜ್​ಕುಮಾರ್​ ಅವರು ಹೇಳಿದಂತೆ ಅಭಿಮಾನಿಗಳೇ ನಮ್ಮ ದೇವ್ರು ಎಂದು ಡೈಲಾಗ್​ ಹೊಡೆದಿದ್ದಾರೆ.

ಕನ್ನಡದಲ್ಲಿ ಅಭಿಮಾನಿಗಳೇ ನಮ್ಮ ದೇವ್ರು ಎಂದು ರಜತ್ ಪಾಟಿದಾರ್ ಹೊಡೆದ ಡೈಲಾಗ್​ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಅಭಿಮಾನಿಗಳಿಗೆ ದೇವ್ರು RCBನೇ. ಕನ್ನಡ ಮಾತಾಡಿ ಮನಸ್ಸು ಗೆದ್ದು ಬಿಟ್ಟೆ, ಈ ಸಲ cup ನಮ್ದೇ, ನಮ್ಮ ನಾಯಕ ನಮ್ಮ ಹೆಮ್ಮೆ ಎಂದು ಕಾಮೆಂಟ್ಸ್​ ಹಾಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here